ಕಣ್ಣೂರ್: ಆರೆಸ್ಸೆಸ್ ಕಾರ್ಯಕರ್ತನ ಕಗ್ಗೊಲೆ-ನಾಳೆ ಹರತಾಳ
ಕಣ್ಣೂರ್,ಮೇ 12: ಕಣ್ಣೂರ್ ಪಯಂಗಾಡಿಯಲ್ಲಿ ನಡೆದ ಆರೆಸ್ಸೆಸ್ ಕಾರ್ಯಕತನಕೊಲೆಯನ್ನು ಪ್ರತಿಭಟಿಸಿ ಕಣ್ಣೂರಿನಲ್ಲಿ ನಾಳೆ ಹರತಾಳನಡೆಯಲಿದೆ. ಕೊಲೆಯಾದ ವ್ಯಕ್ತಿಯನ್ನು ಕಣ್ಣೂರ್ ಕಕ್ಕಾಂಪಾರ ನಿವಾಸಿ ಚುರಕ್ಕಾಡ್ ಬಿಜು ಎಂದು ಗುರುತಿಸಲಾಗಿದೆ.
ಕಕ್ಕಾಂಪಾರದಲ್ಲಿ ಆರೆಸ್ಸೆಸ್ ಕಾರ್ಯವಾಹಕ್ ಆಗಿರುವ ಬಿಜು, ಪಯ್ಯನ್ನೂರ್ ಧನರಾಜ್ ಕೊಲೆಪ್ರಕರಣದ ಹನ್ನೆರಡನೆ ಆರೋಪಿಯಾಗಿದ್ದ ಧನರಾಜ್ ಕೊಲೆಪ್ರಕರಣದಲ್ಲಿ ಜಾಮೀನಿನಲ್ಲಿ ಬಿಡುಗಡೆಗೊಂಡ ಬಿಜು ನಿನ್ನೆಯಷ್ಟೇ ತನ್ನ ಮನೆಗೆ ಬಂದಿದ್ದ.
ಇಂದು ಮಧ್ಯಾಹ್ನದ ನಂತರ ವಾಹನವೊಂದರಲ್ಲಿ ಬಂದ ತಂಡ ಈತನ ಮೇಲೆ ಬಾಂಬೆಸೆದಿದೆ. ಬಳಿಕ ಚೂರಿಯಿಂದ ಇರಿದು ಕೊಂದುಹಾಕಿದೆ. ಪಯಂಗಾಡಿ ಸೇತುವೆ ಬಳಿ ಕೊಲೆಕೃತ್ಯ ನಡೆದಿದ್ದು, ಇರಿತದಿಂದ ಗಂಭೀರಗಾಯಗೊಂಡಿದ್ದ ಬಿಜುವನ್ನು ಪರಿಯಾರಂ ಮೆಡಿಕಲ್ ಕಾಲೆಜು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತನಾಗಿದ್ದಾನೆ. ಸ್ಥಳದಲ್ಲಿ ಉದ್ವಿಗ್ನಸ್ಥಿತಿ ನೆಲೆಸಿದೆ. ಕೊಲೆಯ ಹಿನ್ನೆಲೆಯಲ್ಲಿ ಕಾಕ್ಕಂಪಾರ ಮತ್ತು ಪರಿಸರದಲ್ಲಿ ಭಾರೀ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ