×
Ad

ಟೆಕ್ಸಾಸ್: ಮುಸ್ಲಿಮ್ ಕುಟುಂಬಕ್ಕೆ ಕಿರುಕುಳ

Update: 2017-05-12 21:58 IST

ಹ್ಯೂಸ್ಟನ್ (ಅಮೆರಿಕ), ಮೇ 12: ಟೆಕ್ಸಾಸ್ ಪಟ್ಟಣದ ಬೀಚೊಂದರಲ್ಲಿ ಮುಸ್ಲಿಮ್ ಕುಟುಂಬವೊಂದರ ಸದಸ್ಯರು ವಿಹರಿಸುತ್ತಿದ್ದಾಗ ದುಷ್ಕರ್ಮಿಯೊಬ್ಬ ಅವರಿಗೆ ಕಿರುಕುಳ ನೀಡಿದ ಘಟನೆ ವರದಿಯಾಗಿದೆ.

ಸೌತ್ ಪ್ಯಾಡರ್ ದ್ವೀಪದಲ್ಲಿ ಕುಟುಂಬದ 14 ಸದಸ್ಯರು ವಿಹರಿಸುತ್ತಿದ್ದಾಗ ಅವರನ್ನು ಸಮೀಪಿಸಿದ ವ್ಯಕ್ತಿಯು, ‘‘ಡೊನಾಲ್ಡ್ ಟ್ರಂಪ್ ನಿಮ್ಮನ್ನು ತಡೆಯುತ್ತಾರೆ’’ ಎಂದು ಹೇಳಿದನು.

ಆತನು ಅಸಹ್ಯ ಭಾಷೆಯಲ್ಲಿ ಜನಾಂಗೀಯ ನಿಂದನೆ ಗೈದ ವೀಡಿಯೊ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಆತನನ್ನು ಕಳೆದ ವಾರ ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News