ಮಾಂಸಾಹಾರ ನಿರಾಕರಿಸುವಂತಿಲ್ಲ ಯೋಗಿ ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2017-05-12 18:23 GMT

  ಹೊಸದಿಲ್ಲಿ, ಮೇ 12: ಮನುಷ್ಯರಿಗೆ ಮಾಂಸಾಹಾರ ಸೇವಿಸುವ ಹಕ್ಕಿದೆ. ಇದನ್ನು ಸರಕಾರ ನಿರಾಕರಿಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತಿಳಿಸಿದೆ.

ಉತ್ತರ ಪ್ರದೇಶ ರಾಜ್ಯದಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಲು ಕ್ರಮ ಕೈಗೊಂಡ ಯೋಗಿ ಆದಿತ್ಯನಾಥ್ ಸರಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸುಮಾರು 27 ಅರ್ಜಿಗಳ ವಿಚಾರಣೆ ವೇಳೆ ಹೈಕೋರ್ಟ್ ಈ ಹೇಳಿಕೆ ನೀಡಿದೆ. ಅಲ್ಲದೆ ಹೊಸ ಕಸಾಯಿಖಾನೆಗೆ ಅನುಮತಿ ನೀಡುವಂತೆ ಮತ್ತು ಹಳೆಯ ಪರವಾನಿಗೆಯನ್ನು ನವೀಕರಿಸುವಂತೆ ಉ.ಪ್ರದೇಶ ಸರಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿರುವುದಾಗಿ ವರದಿಯಾಗಿದೆ. ಪರವಾನಿಗೆಯ ಅವಧಿ ಕೊನೆಗೊಂಡವರು ಮತ್ತು ಹೊಸದಾಗಿ ಪರವಾನಿಗೆ ಪಡೆಯ ಬಯಸುವವರು ಆಹಾರ ಸುರಕ್ಷಾ ಇಲಾಖೆಗೆ ಅರ್ಜಿ ಸಲ್ಲಿಸುವಂತೆಯೂ ಕೋರ್ಟ್ ತಿಳಿಸಿದೆ. ಕಸಾಯಿಖಾನೆ ವಿವಾದವನ್ನು ತ್ವರಿತವಾಗಿ ಇತ್ಯರ್ಥ ಮಾಡುವಂತೆಯೂ ರಾಜ್ಯ ಸರಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News