ಪ್ರತ್ಯೇಕತಾವಾದಿ ಹುರ್ರಿಯತ್ ನಾಯಕರ ಶಿರಚ್ಛೇದನದ ಎಚ್ಚರಿಕೆ

Update: 2017-05-13 04:15 GMT

ಹೊಸದಿಲ್ಲಿ, ಮೇ 13: ಕಾಶ್ಮೀರ ಹೋರಾಟವನ್ನು ಇಸ್ಲಾಮಿಕ್ ರಾಜ್ಯ ಸ್ಥಾಪನೆಯ ಉದ್ದೇಶ ಹೊಂದಿದ ಧಾರ್ಮಿಕ ಯುದ್ಧವೆಂದು ಬಣ್ಣಿಸುವ ಬದಲು ಅದನ್ನೊಂದು ರಾಜಕೀಯ ಹೋರಾಟವೆಂದು ಹೇಳಿರುವ ಪ್ರತ್ಯೇಕತಾವಾದಿ ಹುರ್ರಿಯತ್ ನಾಯಕರ ಶಿರಚ್ಛೇದಗೊಳಿಸುವುದಾಗಿ ಪ್ರಮುಖ ಹಿಜ್ಬುಲ್ ಮುಜಾಹಿದ್ದೀನ್ ನಾಯಕನೋ ಎಚ್ಚರಿಕೆ ನೀಡಿದ್ದಾರೆ. ಈ ಬಗೆಗಿನ ವೀಡಿಯೋ ಕ್ಲಿಪ್ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಮಾತನಾಡುತ್ತಿರುವಾತ ಸ್ಥಳೀಯ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಝಕೀರ್ ಮೂಸಾ ಎಂದು ಶಂಕಿಸಲಾಗಿದೆ.

ಕಾಶ್ಮೀರಿಗಳ ಒಂದು ಗುಂಪಿನ ರಾಜಕೀಯ ಅಭಿಪ್ರಾಯಗಳನ್ನು ಮನ್ನಿಸುವ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳೊಂದಿಗೆ ಹಲವು ಬಾರಿ ಮಾತುಕತೆ ನಡೆಸಿರುವ ಹುರ್ರಿಯತ್ ನಾಯಕರ ವಿರುದ್ಧ ಕೇಳಿ ಬಂದಿರುವ ಪ್ರಥಮ ಬೆದರಿಕೆ ಇದು ಎನ್ನಲಾಗಿದೆ. ಹುರ್ರಿಯತ್ ನಾಯಕರನ್ನು ‘ಕಪಟಿಗಳು, ನಾಸ್ತಿಕರು ಹಾಗೂ ಸೈತಾನನ ಅನುಯಾಯಿಗಳು’ ಎಂದು ಬಣ್ಣಿಸಿರುವ ಹಿಜ್ಬುಲ್ ಕಮಾಂಡರ್ ಕಾಶ್ಮೀರವನ್ನು ಇಸ್ಲಾಮಿಕ್ ಸ್ಟೇಟ್ ಮಾಡುವ ಹಾದಿಗೆ ಅಡ್ಡಿಯಾದರೆ ಅವರ ಶಿರಚ್ಛೇದನಗೈಯ್ಯುವುದಾಗಿ ಹೇಳಿಕೊಂಡಿದ್ದಾನೆ. ಅವರ ಶಿರಗಳನ್ನು ಶ್ರೀನಗರದ ಲಾಲ್ ಚೌಕದಲ್ಲಿ ನೇತಾಡಿಸುವುದಾಗಿಯೂ ಎಚ್ಚರಿಕೆಯನ್ನು ಈ ವೀಡಿಯೋದಲ್ಲಿ ನೀಡಲಾಗಿದೆ.

ಶೊಪಿಯನ್ ಗ್ರಾಮದಲ್ಲಿ ರಜೆಯಲ್ಲಿದ್ದ ಸೇನಾ ಅಧಿಕಾರಿಯೊಬ್ಬರನ್ನು ಅಪಹರಿಸಿ ಕೊಂದ ಘಟನೆಯ ಎರಡು ದಿನಗಳ ನಂತರ ಈ ವೀಡಿಯೋ ಬಹಿರಂಗಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News