ಸನ್‌ರೈಸರ್ಸ್ ಹೈದರಾಬಾದ್ ಪ್ಲೇ ಆಫ್‌ಗೆ ಪ್ರವೇಶ
ಕಾನ್ಪುರ, ಮೇ 13: ವೇಗದ ಬೌಲರ್ ಮುಹಮ್ಮದ್ ಸಿರಾಜ್ ಭರ್ಜರಿ ಬೌಲಿಂಗ್(4-32) , ನಾಯಕ ಡೇವಿಡ್ ವಾರ್ನರ್ ಅಜೇಯ ಅರ್ಧಶತಕ(69) ಹಾಗೂ ವಿಜಯ್ ಶಂಕರ್ ಕೊಡುಗೆಯ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡಗುಜರಾತ್ ಲಯನ್ಸ್ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿತು. ಈ ಗೆಲುವಿನ ಮೂಲಕ ಒಟ್ಟು 17 ಅಂಕ ಗಳಿಸಿದ ಹೈದರಾಬಾದ್ ಪ್ಲೇ-ಆಫ್‌ಗೆ ತೇರ್ಗಡೆಯಾಗಿದೆ.
ಗ್ರೀನ್‌ಪಾರ್ಕ್ ಸ್ಟೇಡಿಯಂನಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಗುಜರಾತ್ ತಂಡ ಆರಂಭಿಕ ಆಟಗಾರರಾದ ಡರೆನ್ ಸ್ಮಿತ್(54 ರನ್, 33 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಇಶಾನ್ ಕಿಶನ್(61 ರನ್, 40 ಎಸೆತ, 5 ಬೌಂಡರಿ, 4 ಸಿಕ್ಸರ್)ಮೊದಲ ವಿಕೆಟ್‌ಗೆ ಸೇರಿಸಿದ 111 ರನ್ ನೆರವಿನಿಂದ ಉತ್ತಮ ಆರಂಭ ಪಡೆದಿತ್ತು. ಆದರೆ, ಸನ್‌ರೈಸರ್ಸ್ ಬೌಲರ್‌ಗಳಾದ ಸಿರಾಜ್, ರಶೀದ್ ಖಾನ್(3-34) ಹಾಗೂ ಭುವನೇಶ್ವರ ಕುಮಾರ್ ದಾಳಿಗೆ ತತ್ತರಿಸಿ 19.2 ಓವರ್‌ಗಳಲ್ಲಿ 154 ರನ್‌ಗೆ ಆಲೌಟಾಯಿತು.
ಸ್ಮಿತ್-ಕಿಶನ್ ಜೋಡಿ ನೀಡಿದ್ದ ಉತ್ತಮ ಆರಂಭದ ಲಾಭ ಪಡೆಯಲು ಗುಜರಾತ್ ವಿಫಲವಾಯಿತು. ಈ ಇಬ್ಬರು ಔಟಾದ ಬಳಿಕ ರವೀಂದ್ರ ಜಡೇಜ(ಅಜೇಯ 20) ಹೊರತುಪಡಿಸಿ ಉಳಿದವರು ದೊಡ್ಡ ಸ್ಕೋರ್ ಗಳಿಸಲು ವಿಫಲರಾದರು.
ಗೆಲ್ಲಲು 155 ರನ್ ಗುರಿ ಪಡೆದಿದ್ದ ಸನ್‌ರೈಸರ್ಸ್ ತಂಡ 18.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ನಾಯಕ ಡೇವಿಡ್ ವಾರ್ನರ್(ಅಜೇಯ 69, 52 ಎಸೆತ, 9 ಬೌಂಡರಿ) ಹಾಗೂ ವಿಜಯ್ ಶಂಕರ್(ಅಜೇಯ 63, 44 ಎಸೆತ, 9 ಬೌಂಡರಿ)3ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 133 ರನ್ ಜೊತೆಯಾಟ ನಡೆಸಿ ತಂಡದ ಗೆಲುವಿನ ಹಾದಿ ಸುಗಮಗೊಳಿಸಿದರು.
ಗುಜರಾತ್‌ನ ಪರ ಪ್ರವೀಣ್ ಕುಮಾರ್(2-22) ಯಶಸ್ವಿ ಬೌಲರ್ ಎನಿಸಿಕೊಂಡರು.
ಸ್ಕೋರ್ ವಿವರ
ಗುಜರಾತ್ ಲಯನ್ಸ್: 19.2 ಓವರ್‌ಗಳಲ್ಲಿ 154 ರನ್‌ಗೆ ಆಲೌಟ್
ಸ್ಮಿತ್ ಎಲ್‌ಬಿಡಬ್ಲು ರಶೀದ್ ಖಾನ್ 54
ಇಶಾನ್ ಕಿಶನ್ ಸಿ ಓಜಾ ಬಿ ಸಿರಾಜ್ 61
ಸುರೇಶ್ ರೈನಾ ಸಿ ಧವನ್ ಬಿ ಸಿರಾಜ್ 02
ಕಾರ್ತಿಕ್ ಸಿ ಹೂಡ ಬಿ ರಶೀದ್ ಖಾನ್ 00
ಫಿಂಚ್ ಬಿ ರಶೀದ್ ಖಾನ್ 02
ರವೀಂದ್ರ ಜಡೇಜ ಅಜೇಯ 20
ಫಾಕ್ನರ್ ಬಿ ಸಿರಾಜ್ 08
ಸಾಂಗ್ವಾನ್ ಬಿ ಸಿರಾಜ್ 00
ಅಂಕಿತ್ ಸೋನಿ ಬಿ ಕೌಲ್ 00
ಪ್ರವೀಣ್‌ಕುಮಾರ್ ಬಿ ಕುಮಾರ್ 01
ಮುನಾಫ್ ಪಟೇಲ್ ಬಿ ಕುಮಾರ್ 00
ಇತರ 06
ವಿಕೆಟ್ ಪತನ: 1-111, 2-120, 3-120, 4-120, 5-123, 6-142, 7-142, 8-153, 9-154.
ಬೌಲಿಂಗ್ ವಿವರ
ಭುವನೇಶ್ವರ ಕುಮಾರ್ 3.2-0-25-2
ಮುಹಮ್ಮದ್ ಸಿರಾಜ್ 4-0-32-4
ಸಿದ್ದಾರ್ಥ್ ಕೌಲ್ 4-0-30-1
ಮುಹಮ್ಮದ್ ನಬಿ 3-0-17-0
ರಶೀದ್ ಖಾನ್ 4-0-34-3
ಹೆನ್ರಿಕ್ಸ್ 1-0-12-0
ಸನ್‌ರೈಸರ್ಸ್ ಹೈದರಾಬಾದ್: 18.1 ಓವರ್‌ಗಳಲ್ಲಿ 158/2
ವಾರ್ನರ್ ಅಜೇಯ 69
ಧವನ್ ಸಿ ಫಾಕ್ನರ್ ಬಿ ಕುಮಾರ್ 18
ಹೆನ್ರಿಕ್ಸ್ ಸಿ ಕಾರ್ತಿಕ್ ಬಿ ಕುಮಾರ್ 04
ಶಂಕರ್ ಅಜೇಯ 63
ವಿಕೆಟ್ ಪತನ: 1-20, 2-25
ಬೌಲಿಂಗ್ ವಿವರ
ಪ್ರವೀಣ್ ಕುಮಾರ್ 4-0-22-2
ಸಾಂಗ್ವಾನ್ 4-0-37-0
ಫಾಕ್ನರ್ 2-0-24-0
ಮುನಾಫ್ ಪಟೇಲ್ 3-0-22-0
ರವೀಂದ್ರ ಜಡೇಜ 3-0-19-0
ಅಂಕಿತ್ ಸೋನಿ 2.1-0-31-0
ಪಂದ್ಯಶ್ರೇಷ್ಠ: ಮುಹಮ್ಮದ್ ಸಿರಾಜ್.