ಚೆಲ್ಸಿ ತಂಡಕ್ಕೆ ಪ್ರೀಮಿಯರ್ ಲೀಗ್ ಪ್ರಶಸ್ತಿ

Update: 2017-05-13 18:04 GMT

ಲಂಡನ್, ಮೇ 13: ನಾಟಕೀಯ ತಿರುವಿನಲ್ಲಿ ಬದಲಿ ಆಟಗಾರ ಮಿಕಿ ಬ್ಯಾಟ್‌ಶುವಾಯಿ 82ನೆ ನಿಮಿಷದಲ್ಲಿ ಬಾರಿಸಿದ ಏಕೈಕ ಗೋಲು ನೆರವಿನಿಂದ ಚೆಲ್ಸಿ ಫುಟ್ಬಾಲ್ ತಂಡ ವೆಸ್ಟ್ ಬ್ರೋಮ್‌ವಿಚ್ ಆ್ಯಲ್ಬಿಯನ್ ತಂಡವನ್ನು 1-0 ಅಂತರದಿಂದ ಮಣಿಸಿತು. ಈ ಗೆಲುವಿನ ಮೂಲಕ ಚೆಲ್ಸಿ ತಂಡ ಮೂರು ವರ್ಷಗಳ ಅಂತರದಲ್ಲಿ ಎರಡನೆ ಬಾರಿ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಒಟ್ಟಾರೆ ಆರನೆ ಬಾರಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

  ‘‘ಇದು ಆಟಗಾರರ ಶ್ರೇಷ್ಠ ಸಾಧನೆ. ಆಟಗಾರರ ಬದ್ಧತೆ ಹಾಗೂ ಕಠಿಣ ಕೆಲಸಕ್ಕೆ ನಾನು ಕೃತಜ್ಞತೆ ಸಲ್ಲಿಸುವೆ. ಈ ವರ್ಷ ಏನಾದರೂ ಸಾಧನೆ ಮಾಡಬೇಕೆಂಬ ಛಲದಲ್ಲಿ ಆಡಿದ್ದಾರೆ. ಈ ಗೆಲುವಿನ ಬಳಿಕ ನನಗೆ ತುಂಬಾ ಸಂತೋಷವಾಗಿದೆ’’ ಎಂದು ಚೆಲ್ಸಿ ತಂಡದ ಇಟಲಿಯ ಕೋಚ್ ಆ್ಯಂಟೊನಿ ಕಾಂಟೆ ಹೇಳಿದ್ದಾರೆ.

*ಚೆಲ್ಸಿ ತಂಡ ಆರನೆ ಬಾರಿ ಪ್ರೀಮಿಯರ್ ಲೀಗ್ ಪ್ರಶಸ್ತಿ ಜಯಿಸಿತು.

* ಚೆಲ್ಸಿ ಇಂಗ್ಲೆಂಡ್‌ನ ಪ್ರತಿಷ್ಠಿತ ಪ್ರಶಸ್ತಿ ಜಯಿಸಿದ ಮೊದಲ ಕ್ಲಬ್ ಆಗಿದೆ. 1989ರಲ್ಲಿ ಅರ್ಸೆನೆಲ್ ಈ ಸಾಧನೆ ಮಾಡಿತ್ತು.

*ಕಾಂಟೆ ಇಂಗ್ಲೆಂಡ್‌ನ ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಇಟಲಿಯ ನಾಲ್ಕನೆ ಮ್ಯಾನೇಜರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News