ಹಿಜಾಬ್ ಧರಿಸಿದ್ದಕ್ಕಾಗಿ ಮಹಿಳೆಯನ್ನು ಬ್ಯಾಂಕ್ ನಿಂದ ಹೊರದಬ್ಬಿದರು!
ನ್ಯೂಯಾರ್ಕ್, ಮೇ 14: ಹಿಜಾಬ್ ಧರಿಸಿದ ಕಾರಣ ಮುಸ್ಲಿಂ ಮಹಿಳೆಯೋರ್ವರನ್ನು ಬ್ಯಾಂಕ್ ನಿಂದ ಹೊರದಬ್ಬಿದ ಘಟನೆ ಅಮೆರಿಕದಲ್ಲಿ ನಡೆದಿದೆ. ಹಿಜಾಬ್ ತೆಗೆಯದಿದ್ದಲ್ಲಿ ಪೊಲೀಸರನ್ನು ಕರೆಸುವುದಾಗಿಯೂ ಬ್ಯಾಂಕ್ ಸಿಬ್ಬಂದಿ ಮಹಿಳೆಯನ್ನು ಬೆದರಿಸಿದ್ದಾರೆ ಎನ್ನಲಾಗಿದೆ.
ಕಾರ್ ಪೇಮೆಂಟ್ ಗೋಸ್ಕರ ಜಮೀಲಾ ಮುಹಮ್ಮದ್ ಎಂಬವರು ವಾಷಿಂಗ್ಟನ್ ನಲ್ಲಿರುವ ಸೌಂಡ್ ಕ್ರೆಡಿಟ್ ಯುನಿಯನ್ ಗೆ ತೆರಳಿದ್ದರು. ಅಮೆರಿಕನ್ ಮಹಿಳೆಯಾಗಿರುವ ಜಮೀಲಾ ಯುನಿಯನ್ ನ ಸದಸ್ಯರೂ ಹೌದು.
ತಾನು ಬ್ಯಾಂಕ್ ಗೆ ತೆರಳಿದ್ದ ವೇಳೆ ಅಲ್ಲಿನ ಸಿಬ್ಬಂದಿ ಹಿಜಾಬ್ ತೆಗೆಯುವಂತೆ ಸೂಚಿಸಿದರು. ಯುನಿಯನ್ ಒಳಗೆ ಹ್ಯಾಟ್ ಗಳು, ಸನ್ ಗ್ಲಾಸ್ ಗಳನ್ನು ಧರಿಸುವುದಕ್ಕೆ ಅವಕಾಶವಿಲ್ಲದುದ್ದರಿಂದ ಜಮೀಲಾ ತಲೆಗವಚ ತೆಗೆದು ಬಂದಿದ್ದರು. ನಂತರ ಬ್ಯಾಂಕ್ ನೊಳಗೆ ತನ್ನ ಸರದಿಗಾಗಿ ಕಾಯುತ್ತಿದ್ದಾಗ ಜಮೀಲಾ ಸೂಚನೆಗಳನ್ನು ಹಾಗೂ ಬೇಸ್ ಬಾಲ್ ಕ್ಯಾಪ್ ಧರಿಸಿದ್ದರೂ ಇಬ್ಬರು ಪುರುಷರಿಗೆ ಬ್ಯಾಂಕ್ ಸಿಬ್ಬಂದಿ ಯಾವುದೇ ಆಕ್ಷೇಪ ವ್ಯಕ್ತಪಡಿಸದಿರುವ ಬಗ್ಗೆ ವಿಡೀಯೋ ಮಾಡಿದ್ದರು.
“ಹ್ಯಾಟ್ ಧರಿಸಿದ್ದರೂ ಅವರಿಗೆ ಸೇವೆ ಒದಗಿಸಲಾಗುತ್ತದೆ ಆದರೆ ನಾನು ತಲೆಗವಚ ತೆಗೆಬೇಕೆಂದು ಏಕೆ ಹೇಳುತ್ತೀರಿ. ಇದು ನನ್ನ ತಲೆಗವಚ ಹಾಗೂ ನನ್ನ ಮುಖ ನಿಮಗೆ ಕಾಣಿಸುತ್ತಿದೆ. ಯಾವತ್ತೂ ಇಲ್ಲದ ಆಕ್ಷೇಪ ಇವತ್ತೇಕೆ” ಎಂದು ಜಮೀಲಾ ಬ್ಯಾಂಕ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದರು,
ಈ ಸಂದರ್ಭ ಅಲ್ಲಿಗೆ ಆಗಮಿಸಿದ ಕ್ರೆಡಿಟ್ ಯುನಿಯನ್ ಸುಪರ್ ವೈಸರ್ ಹಿಜಾಬ್ ತೆಗೆಯದಿದ್ದಲ್ಲಿ ಪೊಲೀಸರನ್ನು ಕರೆಸುವುದಾಗಿ ಬೆದರಿಕೆಯೊಡ್ಡಿದ್ದರು. ಈ ಸಂದರ್ಭ ನನಗೆ ಮಾತೇ ಹೊರಡಲಿಲ್ಲ ಎಂದು ಜಮೀಲಾ ಹೇಳಿದ್ದಾರೆ.
ಜಮೀಲಾರನ್ನು ಬ್ಯಾಂಕ್ ಸಿಬ್ಬಂದಿ ಹೊರದಬ್ಬಿದ್ದು, ಕಣ್ಣೀರು ಹಾಕುತ್ತಲೇ ಅವರು ಹೊರಬಂದರು. ಈ ಬಗ್ಗೆ ವಿಡಿಯೋವೊಂದನ್ನು ಫೇಸ್ಬುಕ್ ನಲ್ಲಿ ಶೇರ್ ಮಾಡಿದ್ದು, “ಇಂತಹ ಘಟನೆಗಳನ್ನು ಯಾರಿಗೂ ಎದುರಾಗದಿರಲಿ, ಯಾರನ್ನೂ ಈ ರೀತಿ ನಡೆಸಿಕೊಳ್ಳಬಾರದು” ಎಂದಿದ್ದಾರೆ.
ಜಮೀಲಾರ ನಂತರ ಸೌಂಡ್ ಯುನಿಯನ್ ಫೇಸ್ಬುಕ್ ನಲ್ಲಿ ಫೋಸ್ಟೊಂದನ್ನು ಹಾಕಿದ್ದು, ಪರಿಸ್ಥಿಯನ್ನು ಸರಿಯಾಗಿ ನಿಭಾಯಿಸಿಲ್ಲ. ಆದ್ದರಿಂದ ಕ್ಷಮೆಯಾಚಿಸುತ್ತಿದ್ದು, ಇಂತಹ ಘಟನೆಗಳು ಮುಂದೆ ಮರುಕಳಿಸುವುದಿಲ್ಲ ಎಂದಿದೆ.