×
Ad

ಅರ್ಜುನ್ ಮೈನಿ ಐತಿಹಾಸಿಕ ಸಾಧನೆ

Update: 2017-05-14 22:52 IST

ಹೊಸದಿಲ್ಲಿ, ಮೇ 14: ಜೆಂಝೆರ್ ಮೋಟಾರ್ ಸ್ಪೋರ್ಟ್ಸ್ ತಂಡದ ಭಾರತದ ಚಾಲಕ ಅರ್ಜುನ್ ಮೈನಿ ಜಿಪಿ3 ಸಿರೀಸ್‌ನ್ನು ಜಯಿಸುವುದರೊಂದಿಗೆ ಐತಿಹಾಸಿಕ ಸಾಧನೆ ಮಾಡಿದರು.

ಬಾರ್ಸಿಲೋನದಲ್ಲಿ ರವಿವಾರ ನಡೆದ ಜಿಪಿ3 ಸಿರೀಸ್‌ನ ಮೊದಲ ಸುತ್ತಿನ ರೇಸ್-2ರಲ್ಲಿ ಪ್ರಾಬಲ್ಯ ಮೆರೆದ 19ರ ಹರೆಯದ ಅರ್ಜುನ್ ಈ ಸಾಧನೆ ಮಾಡಿದ ಭಾರತದ ಮೊದಲ ಎಫ್-1 ಚಾಲಕನಾಗಿದ್ದಾರೆ. ಈ ಸಾಧನೆಯ ಮೂಲಕ ಅರ್ಜುನ್ ಒಟ್ಟು 23 ಅಂಕ ಗಳಿಸಿ ಡ್ರೈವರ್‌ಗಳ ಚಾಂಪಿಯನ್‌ಶಿಪ್‌ನಲ್ಲಿ 3ನೆ ಸ್ಥಾನಕ್ಕೇರಿದ್ದಾರೆ.

ಅರ್ಜುನ್ ಶನಿವಾರ ನಡೆದ ರೇಸ್-1ರ ಮೊದಲ ಸುತ್ತಿನಲ್ಲಿ 7ನೆ ಸ್ಥಾನಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News