×
Ad

ಭಾರತಕ್ಕೆ ನುಸುಳಲು ಯತ್ನಿಸಿದ ಪಾಕ್ ನ ವೃದ್ಧೆಯ ಹತ್ಯೆ

Update: 2017-05-15 10:45 IST

ಹೊಸದಿಲ್ಲಿ, ಮೇ 15: ಗುರುದಾಸ್ಪು ರದ  ಭಾರತದ ಗಡಿ ಮೂಲಕ  ನುಸುಳಲು ಯತ್ನಿಸಿದ ಪಾಕಿಸ್ತಾನದ ಅರುವತ್ತರ ಹರೆಯದ ವೃದ್ದೆಯನ್ನು ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಸೋಮವಾರ ಬೆಳಗ್ಗಿನ ಜಾವ ಗುಂಡಿಟ್ಟು ಕೊಂದು ಹಾಕಿದೆ.
ಭಾರಿಯಲ್ ತಪಸಣಾ ಕೇಂದ್ರ ಬಳಿ ಭಾರತದೊಳಕ್ಕೆ ನುಸುಳಲು ಯತ್ನಿಸಿದ ಮಹಿಳೆಯನ್ನು ಬಿಎಸ್‌ಎಫ್‌ ಯೋಧರು ಗುಂಡಿಟ್ಟು ಕೊಂದಿದ್ದಾರೆ. ಈಕೆ ಪಾಕಿಸ್ತಾನದ ಪ್ರಜೆ ಎಂದು ತಿಳಿದು ಬಂದಿದೆ. 
ಗಡಿಯ ಮೂಲಕ ಉಗ್ರರು ನುಸುಳಿರುವ ಬಗ್ಗೆ ಗುಮನಿ ವ್ಯಕ್ತಪಡಿಸಿರುವ ಬಿಎಸ್‌ಎಫ್‌ ಯೋಧರು ಶೋಧ ಮುಂದುವರಿಸಿದ್ದಾರೆ.
ರವಿವಾರ  ಇಂಡೋ-ನೇಪಾಳ ಗಡಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಭಯೋತ್ಪಾದಕನನ್ನು ಅಧಿಕಾರಿಗಳು ಬಂಧಿಸಿದ್ದರು. ಇದರ ಬೆನ್ನಲ್ಲೇ ಗಡಿ ನುಸುಳಲು ಯತ್ನಿಸುತ್ತಿದ್ದ ಪಾಕ್ ನ ಮಹಿಳೆಯನ್ನು ಬಿಎಸ್‌ಎಫ್ ಯೋಧರು  ಗುಂಡಿಟ್ಟು ಹತ್ಯೆ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News