ನಜೀಬ್ ನಾಪತ್ತೆ ಪ್ರಕರಣ: ಮಸೀದಿಗಳಿಂದ ನೆರವು ಕೋರಿದ ಪೊಲೀಸರು
Update: 2017-05-15 11:12 IST
ಹೊಸದಿಲ್ಲಿ, ಮೇ 15: ಜೆಎನ್‌ಯು ಕ್ಯಾಂಪಸ್ ಹಾಸ್ಟೆಲ್‌ನಿಂದ ನಿಗೂಢವಾಗಿ ನಾಪತ್ತೆಯಾದ ನಜೀಬ್ ಅಹ್ಮದ್‌ನ ತನಿಖೆಯವಿಚಾರದಲ್ಲಿ ದಿಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಕೇಸಿನಲ್ಲಿ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ದಿಲ್ಲಿಪೊಲೀಸರು ಮಸೀದಿಗಳಿಂದ ನೆರವನ್ನು ಕೋರಿದ್ದಾರೆ. ದಿಲ್ಲಿ, ದಿಲ್ಲಿಗೆ ಸಮೀಪದ ಉತ್ತರಪ್ರದೇಶದ ನಗರಗಳ ಮಸೀದಿ ಇಮಾಮರಿಗೆ ಈಕುರಿತು ಸೂಚನೆ ನೀಡಲಾಗಿದೆ. ನಜೀಬ್‌ನ ಕುರಿತು ಪ್ರಾರ್ಥನೆಯ ಸಮಯದಲ್ಲಿ ಮೈಕ್‌ನಲ್ಲಿ ಹೇಳಬೇಕೆಂಬುದು ಪೊಲೀಸರಿಂದ ಇಮಾಮರುಗಳಿಗೆ ಸಿಕ್ಕಿದ ಸೂಚನೆಯಾಗಿದೆ. ಚಾಂದ್‌ನಿ ಚೌಕ್‌ನ ಫತೇಪುರಿ ಮಸೀದಿ ಇಮಾಮ್‌ಗೆ ಪೊಲೀಸರ ಸೂಚನೆ ಲಭಿಸಿದೆ. ನಜೀಬ್‌ನ ಪತ್ತೆಗಾಗಿ ಪೊಲೀಸರ ವಿವಿಧ ತಂಡಗಳು ತನಿಖೆ ಕೈಗೊಂಡರೂ ಆತನನ್ನು ಹುಡುಕಲು ಸಾಧ್ಯವಾಗಿಲ್ಲ. ಆದರೆ ಪ್ರಕರಣದಲ್ಲಿ ಪ್ರಗತಿಯಾಗಿದೆ ಎಂದುಪೊಲೀಸರು ಹೇಳಿಕೊಳ್ಳುತ್ತಿದ್ದಾರೆ. ಅದೇ ವೇಳೆ ಪೊಲೀಸರಲ್ಲಿ ವಿಶ್ವಾಸ ಕಳೆದುಕೊಂಡಿದ್ದೇವೆ ಎಂದು ನಜೀಬ್ ಕುಟುಂಬ ಹೇಳುತ್ತಿದೆ.