×
Ad

ಇಂಡಿಯಾನಪೊಲಿಸ್‌ನ ಪ್ರಥಮ ಸಿಖ್ ಪೊಲೀಸ್ ಅಧಿಕಾರಿಯಾಗಿ ಮಿತ್ತನ್ ಕಟೋಚ್

Update: 2017-05-15 20:05 IST

ನ್ಯೂಯಾರ್ಕ್, ಮೇ 15: 26 ವರ್ಷದ ಸಿಖ್ ಅಮೆರಿಕನ್ ವ್ಯಕ್ತಿಯೊಬ್ಬರು, ಅಮೆರಿಕದ ಇಂಡಿಯಾನಪೊಲಿಸ್ ಪೊಲೀಸ್ ಇಲಾಖೆಗೆ ಸೇರ್ಪಡೆಯಾದ ಮೊದಲ ಸಿಖ್ ವ್ಯಕ್ತಿಯಾಗಿ ದಾಖಲಾಗಿದ್ದಾರೆ.

ಇಂಡಿಯಾನ ರಾಜ್ಯದ ರಾಜಧಾನಿ ಇಂಡಿಯಾನಪೊಲಿಸ್ ಮೆಟ್ರೊಪಾಲಿಟನ್ ಪೊಲೀಸ್ ಇಲಾಖೆ (ಐಎಂಪಿಡಿ)ಯಲ್ಲಿ ಕೆಲಸ ಸಿಕ್ಕಿರುವುದು ‘ಅತ್ಯಂತ ದೊಡ್ಡ ಗೌರವ’ವಾಗಿದೆ ಎಂದು ಮಿತ್ತನ್ ಕಟೋಚ್ ಹೇಳಿದ್ದಾರೆ ಎಂದು ಇಂಡಿಯಾನಪೊಲಿಸ್ ಟಿವಿ ‘ಆರ್‌ಟಿವಿ6’ ವರದಿ ಮಾಡಿದೆ.

‘‘ಐಎಂಪಿಡಿಯಲ್ಲಿ ಹೆಚ್ಚಿನ ಸಂಖ್ಯೆಯ ಸಿಖ್ ಪೊಲೀಸ್ ಅಧಿಕಾರಿಗಳು ಇರಬಹುದು ಎಂದು ನಾನು ಭಾವಿಸಿದ್ದೆ. ಆದರೆ, ನಾನೇ ಪ್ರಥಮ ಎಂಬುದು ಈಗ ಗೊತ್ತಾಗಿದೆ’’ ಎಂದು ಕಟೋಚ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News