ಜನನಿಬಿಡ ನಗರದ ರಸ್ತೆಯ ಮೇಲೆ ಸುರಿಯಿತು ಬೆಂಕಿ ಮಳೆ: ಭಯಾನಕ ಘಟನೆಯ ವಿಡಿಯೋ ವೈರಲ್
Update: 2017-05-15 21:37 IST
ಚೀನಾ, ಮೇ 15: ಚೀನಾದ ಜನನಿಬಿಡ ರಸ್ತೆ ಮೇಲೆ ಆಕಾಶದಿಂದ ಬೆಂಕಿ ಕಿಡಿಗಳು ಬಿದ್ದಿದ್ದು, ಈ ಭಯಾನಕ ದೃಶ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಿಂಚು ಹೊಡೆದ ನಂತರ ಬೆಂಕಿಯ ಮಳೆ ಆಕಾಶದಿಂದ ರಸ್ತೆಯ ಮೇಲೆ ಬೀಳುತ್ತಿರುವ ದೃಶ್ಯವನ್ನು ಈ 8 ಸೆಕೆಂಡ್ ನ ವಿಡಿಯೋದಲ್ಲಿ ಕಾಣಬಹುದಾಗಿದೆ.
ಈ ಬಗ್ಗೆ ಚೀನಾ ಪ್ಲಸ್ ನ್ಯೂಸ್ ವರದಿ ಮಾಡಿದ್ದು, ಚೀನಾದ ಲಯೋನಿಂಗ್ ಪ್ರಾಂತ್ಯದ ಶೆನ್ಯಾಂಗ್ ಎಂಬಲ್ಲಿ ಈ ಘಟನೆ ನಡೆದಿದೆ ಎಂದಿದೆ. ಭಾರೀ ಮಿಂಚು ಹೊಡೆದ ನಂತರ ಸೆಕೆಂಡಿನ ಕಾಲ ಕತ್ತಲಾವರಿಸಿ ನಂತರ ಬೆಂಕಿಯ ಕಿಡಿಗಳ ಆಕಾಶದಿಂದ ಬಿದ್ದಿದೆ. ಈ ಸಂದರ್ಭ ಅನೇಕ ಕಾರುಗಳ ಇದೇ ಮಾರ್ಗದಲ್ಲಿ ಸಾಗುತ್ತಿತ್ತು.
ಈ ಪ್ರದೇಶದಲ್ಲಿನ ಶಾಪಿಂಗ್ ಮಾಲ್ ಗಳಲ್ಲಿ ನೂರಾರು ಜನರಿದ್ದು, ಅದೃಷ್ಟವಶಾತ್ ಬೆಂಕಿ ಮಳೆ ಬಿದ್ದ ಪ್ರದೇಶದಲ್ಲಿ ಯಾರೂ ಇರಲಿಲ್ಲ ಎಂದು ಓರ್ವರು ಪ್ರತಿಕ್ರಿಯಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.