×
Ad

ಈ ದಂಪತಿ ತಮ್ಮ ಮಗುವನ್ನು ಮಾರಾಟ ಮಾಡಿದ ಕಾರಣ ಕೇಳಿದರೆ ಆಘಾತ ಖಚಿತ!

Update: 2017-05-15 23:24 IST

ಬೊಕಾರೀ, ಮೇ 15: ಇಲ್ಲೊಬ್ಬ ದಂಪತಿ ತಮ್ಮ ಒಂದೂವರೆ ವರ್ಷದ ಮಗುವನ್ನು 45,000 ರೂ.ಗಳಿಗೆ ಮಾರಿದ್ದು, ಮಗು ಮಾರಾಟದ ಕಾರಣ ತಿಳಿದರೆ ಆಶ್ಚರ್ಯಪಟ್ಟು ಇಂತಹ ಪೋಷಕರೂ ಇದ್ದಾರೆಯೇ ಎಂದೆನಿಸುತ್ತದೆ.  ಏಕೆಂದರೆ ಈ ದಂಪತಿ ಮಗುವನ್ನುಮಾರಿದ್ದು, ಬಡತನದ ಕಾರಣದಿಂದಲೋ ಅಥವಾ ದತ್ತು ರೂಪದಲ್ಲೋ ಅಲ್ಲ. ಬದಲಾಗಿ, ಚಟವಾಗಿಬಿಟ್ಟಿದ್ದ ಮದ್ಯದ ದಾಹವನ್ನು ತಣಿಸಲು!.

ಅತಿಯಾದ ಮದ್ಯಸೇವನೆಯ ಚಟ ಹೊಂದಿರುವ ರಾಜೇಶ್ ಎಂಬಾತ ಹಾಗೂ ಆತನ ಪತ್ನಿ ಮದ್ಯ ಖರೀದಿಸಲು ದುಡ್ಡಿಲ್ಲದೆ ಮಗುವನ್ನು 45 ಸಾವಿರ ರೂ,ಗಳಿಗೆ ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

“ಅರಿವಿಲ್ಲದೆ ಮಗುವನ್ನು ಮಾರಾಟ ಮಾಡಿದ್ದೇವೆ” ಎಂದು ಅವರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನೆರೆಮನೆಯವರು ನೀಡಿದ ಮಾಹಿತಿಯನುಸಾರ ಮಫ್ತಿಯಲ್ಲಿ ತೆರಳಿದ ಪೊಲೀಸರು ದಂಪತಿಯನ್ನು ಸಂಪರ್ಕಿಸಿದ ಪೊಲೀಸರು ಮಗು ಮಾರಾಟದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ಸಂದರ್ಭ ಅದೇ ಜಿಲ್ಲೆಯ 50 ವರ್ಷದ ಮೆಘು ಮಹತೋ ಎಂಬಾತನಿಗೆ ಮಗು ಮಾರಾಟ ಮಾಡಿರುವುದು ತಿಳಿದುಬಂದಿದೆ.

“ಸಂತೋಷ್ ಸಹೀಶ್ ಎಂಬ ಏಜೆಂಟ್ ದಂಪತಿಗೆ 45 ಸಾವಿರ ನೀಡಿ ಮಗುವನ್ನು ಪಡೆದು ಚಕ್ರಧರ್ಪುರದಲ್ಲಿರುವ ವ್ಯಕ್ತಿಯೊಬ್ಬನಿಗೆ ಮಾರಿದ್ದಾನೆ” ಎಂದು ಪೊಲೀಸ್ ಅಧಿಕಾರಿ ಧೀರೇಂದ್ರ ಕುಮಾರ್ ಹೇಳಿದ್ದಾರೆ.

ಮಗುವನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಏಜೆಂಟ್ ಹಾಗೂ ಮಗುವನ್ನು ಪಡೆದುಕೊಂಡಾತನನ್ನು ಬಂಧಿಸಲಾಗಿದ್ದು, ಮಗು ಹೆತ್ತವರ ಮಡಿಲು ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News