×
Ad

ಹೈವೋಲ್ಟೇಜ್ ಲೈನ್‌ನಲ್ಲಿ ಸಿಲುಕಿಕೊಂಡ ಪ್ಯಾರಚ್ಯೂಟ್: ಯುವತಿ ಆಶ್ಚರ್ಯಕರವಾಗಿ ಪಾರು !

Update: 2017-05-16 16:23 IST

ಕೊಲಂಬೊ,ಮೇ 16: ಸೇನಾತರಬೇತಿಯ ಅಂಗವಾಗಿ ಪ್ಯಾರಚ್ಯೂಟ್‌ನಲ್ಲಿ ಹಾರಾಟಕ್ಕಿಳಿದ ಯುವತಿ ಸಾವಿನ ತೆಕ್ಕೆಯಿಂದ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.

ಪ್ಯಾರಚ್ಯೂಟ್ ಇಳಿಸುವ ಪ್ರಯತ್ನ ನಡೆಸಿದಾಗ ಯುವತಿ ಹೈವೋಲ್ಟೇಜ್ ಲೈನಿಗೆ ಸಿಕ್ಕಿಬಿದ್ದಿದ್ದಾರೆ. ಪ್ಯಾರಚ್ಯೂಟ್ ವಿದ್ಯುತ್ ತಂತಿಗೆ ತಾಗಿದ್ದರಿಂದ ದೊಡ್ಡ ಸದ್ದಿನೊಂದಿಗೆ ಸ್ಫೋಟಗೊಂಡಿತ್ತು. ನಂತರ ಬೆಂಕಿ ಹಿಡಿದಿತ್ತು. ಪ್ಯಾರಚ್ಯೂಟ್‌ನಲ್ಲಿದ್ದ ಯುವತಿಗೆ ವಿದ್ಯುತ್ ಶಾಕ್ ಹೊಡೆದಿತ್ತು. ಆದರೆ ಪ್ಯಾರಾಚ್ಯೂಟ್‌ನಿಂದ ಬಿಡಿಸಿಕೊಂಡು ಕೆಳಗೆ ಬಿದ್ದಿದ್ದಾರೆ.ಕೂಡಲೇಅವರನ್ನು ಸೇನಾಆಸ್ಪತ್ರೆಗೆ ಸೇರಿಸಲಾಯಿತು. ಕಾಲಿಗೆ ಸುಟ್ಟಗಾಯವಾಗಿದ್ದು ಬಿಟ್ಟರೆ ಯಾವ ಗಂಭೀರ ಅಪಾಯವೂ ಆಗಿಲ್ಲ. ಈಅವಘಡದ ದೃಶ್ಯವನ್ನು ಸ್ಥಳೀಯ ನಿವಾಸಿಯೊಬ್ಬ ತನ್ನ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾನೆ. ಈವೀಡಿಯೊ ಕೆಳಗೆ ನೀಡಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News