ನವಜಾತ ಶಿಶುವಿನ ಮೃತದೇಹವನ್ನು ಕಿತ್ತುತಿಂದ ಬೀದಿನಾಯಿ

Update: 2017-05-16 12:33 GMT

ಕೊರಾಪುತ್, ಮೇ 16: ನವಜಾತ ಶಿಶುವೊಂದರ ಮೃತದೇಹವನ್ನು ಬೀದಿನಾಯಿಯೊಂದು ಕಿತ್ತು ತಿಂದ ಘಟನೆ ಕೊರಾಪುತ್ ಜಿಲ್ಲೆಯ ಸಬ್ ಡಿವಿಜನಲ್ ಆಸ್ಪತ್ರೆಯ ವ್ಯಾಪ್ತಿಯಲ್ಲಿ ನಡೆದಿದೆ.

ಮಗುವಿನ ಮೃತದೇಹವನ್ನು ನಾಯಿ ತಿನ್ನುತ್ತಿರುವ ದೃಶ್ಯವನ್ನು ನೂರಾರು ಜನರು ನೋಡಿದ್ದು, ಯಾರೂ ನಾಯಿಯನ್ನು  ಅಟ್ಟಲು ಮುಂದಾಗದೆ ಮೂಕ ಪ್ರೇಕ್ಷಕರಾಗಿ ನಿಂತಿದ್ದರು. ಕೆಲವರು ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ ಎಂದು ಪೊಲೀಸರು ಹೇಳದ್ದಾರೆ.

“ಘಟನೆಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ನಾನು ಸ್ಥಳಕ್ಕೆ ಧಾವಿಸಿದೆ. ಆದರೆ ನಾಯಿಯಾಗಲೀ, ಮಗುವಿನ ಮೃತದೇಹವಾಗಲೀ ನನಗೆ ಕಂಡಿಲ್ಲ. ನಮ್ಮ ಆಸ್ಪತ್ರೆಯಿಂದಲೂ ಯಾವುದೇ ರೋಗಿಗಳು ಕಾಣೆಯಾಗಿಲ್ಲ” ಎಂದು ಸಬ್ ಡಿವಿಜನಲ್ ಮೆಡಿಕಲ್ ಆಫಿಸರ್ ಸಿತಾಂಶು ಸತಪತಿ ಹೇಳಿದ್ದಾರೆ.

ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದವರು ಹೇಳಿದ್ದಾರೆ, 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News