ಉತ್ತರಪ್ರದೇಶ: ಗ್ರಾಹಕರಿಗೆ ಮತ್ತೊಮ್ಮೆ ಬೀಫ್ ಕಬಾಬ್ ವಿತರಿಸಲು ಸಜ್ಜಾದ “ಟಂಡೇ ಕಬಾಬ್”
ಲಕ್ನೋ, ಮೇ 16: ಇಲ್ಲಿನ ಪ್ರಖ್ಯಾತ ಖಾದ್ಯ ಹೊಟೇಲ್ ಆದ “ಟಂಡೇ ಕಬಾಬ್” ಬುಧವಾರದಿಂದ ಮತ್ತೊಮ್ಮೆ ಬೀಫ್ ಕಬಾಬ್ ಗಳನ್ನು ಗ್ರಾಹಕರಿಗೆ ವಿತರಿಸಲು ಸಜ್ಜಾಗಿದೆ.
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಲು ಆದೇಶ ಹೊರಡಿಸಿದ ನಂತರ 112 ವರ್ಷಗಳ ವರ್ಷಗಳ. ಪ್ರಸಿದ್ಧ ರೆಸ್ಟೋರೆಂಟ್ ಆದ ಟಂಡೇ ಕಬಾಬ್ ಬೀಫ್ ಕಬಾಬ್ ಗಳ ತಯಾರಿಯನ್ನು ನಿಲ್ಲಿಸಿತ್ತು. ನಂತರ ಚಿಕನ್ ಹಾಗೂ ಮಟನ್ ಕಬಾಬ್ ಗಳು ಇಲ್ಲಿ ದೊರೆಯುತ್ತಿದ್ದುದಾದರೂ ಬೀಫ್ ಕಬಾಬ್ ಗಳಷ್ಟು ರುಚಿಕರವಾಗಿಲ್ಲ ಎಂದು ಗ್ರಾಹಕರು ಅಭಿಪ್ರಾಯಿಸುತ್ತಿದ್ದರು.
“ಬುಧವಾರದಿಂದ ಬೀಫ್ ಕಬಾಬ್ ಗಳನ್ನು ತಯಾರಿಸಲಾಗುವುದು. ಸಮಾಜದ ಬಡವರ್ಗದ ಜನತೆಗೆ ಆಹಾರವನ್ನು ಒದಗಿಸಲು ಸಾಧ್ಯವಾದುದರಿಂದ ಸಂತೋಷವಾಗಿದೆ. ಚಿಕನ್ ಮತ್ತು ಮಟನ್ ಕಬಾಬ್ ಗಳು ದುಬಾರಿಯಾಗಿರುವುದರಿಂದ ಬಡವರು ಬೀಫ್ ಕಬಾಬ್ ಗಳನ್ನೇ ಖರೀದಿಸುತ್ತಿದ್ದರು” ಎಂದು ಮಾಲಕ ಮುಹಮ್ಮದ್ ಉಸ್ಮಾನ್ ಹೇಳಿದ್ದಾರೆ.
ಮಾಂಸ ಮಾರಾಟಗಾರರಿಗೆ ಲೈಸೆನ್ಸ್ ನೀಡಲು ಉತ್ತರ ಪ್ರದೇಶ ಸರಕಾರಕ್ಕೆ ಅಲಹಾಬಾದ್ ಕೋರ್ಟ್ ನೀಡಿರುವ ಆದೇಶದಿಂದ ಸಾವಿರಾರು ಮಾಂಸ ಮಾರಾಟಗಾರರು ಹಾಗೂ ಹೋಟೆಲ್ ಮಾಲಕರು ನಿಟ್ಟುಸಿರು ಬಿಡುವಂತಾಗಿದೆ.