ಮುಸ್ಲಿಮ್ ವಲಯದಲ್ಲಿ ಬೃಹತ್ ಡಿಎನ್‌ಎ ಪರೀಕ್ಷೆ?

Update: 2017-05-16 15:46 GMT

ಬೀಜಿಂಗ್, ಮೇ 17: ಚೀನಾದ ಮುಸ್ಲಿಮ್ ಬಾಹುಳ್ಯದ ಕ್ಸಿನ್‌ಜಿಯಾಂಗ್ ವಲಯದ ನಿವಾಸಿಗಳಿಂದ ಸಾಮೂಹಿಕ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲು ಚೀನಾ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಮಾನವಹಕ್ಕುಗಳ ವೀಕ್ಷಕರು ಮತ್ತು ಸ್ವತಂತ್ರ ಪರಿಣತರು ಮಂಗಳವಾರ ಹೇಳಿದ್ದಾರೆ.

ಡಿಎನ್‌ಎ ಮಾದರಿಗಳ ವಿಶ್ಲೇಷಣೆ ನಡೆಸಲು ಕನಿಷ್ಠ 87 ಲಕ್ಷ ಡಾಲರ್ (ಸುಮಾರು 55.7 ಕೋಟಿ ರೂಪಾಯಿ)ನ ಯಂತ್ರವೊಂದನ್ನು ಖರೀದಿಸುತ್ತಿರುವುದಾಗಿ ಕ್ಸಿನ್‌ಜಿಯಾಂಗ್ ವಲಯದ ಪೊಲೀಸರು ಖಚಿತಪಡಿಸಿದ್ದಾರೆ.

ಈ ಯಂತ್ರ ಹೊರತುಪಡಿಸಿ, 30 ಲಕ್ಷ ಡಾಲರ್ (ಸುಮಾರು 19.2 ಕೋಟಿ ರೂ.) ಮೊತ್ತದ ಇತರ ಯಂತ್ರಗಳನ್ನೂ ಖರೀದಿಸಿರುವ ಬಗ್ಗೆ ಪುರಾವೆಯಿದೆ ಎಂದು ‘ಹ್ಯೂಮನ್ ರೈಟ್ಸ್ ವಾಚ್’ನ ವೀಕ್ಷಕರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News