ಮುಂಬೈ ಗೆಲುವಿಗೆ 163 ರನ್ ಸವಾಲು
Update: 2017-05-16 22:00 IST
ಮುಂಬೈ, ಮೇ 16: ಹತ್ತನೆ ಆವೃತ್ತಿಯ ಐಪಿಎಲ್ ಟ್ವೆಂಟಿ-20ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 162 ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪುಣೆ ತಂಡ 1.5 ಓವರ್‌ಗಳಲ್ಲಿ 9 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು.
ಆರಂಭಿಕ ದಾಂಡಿಗ ರಾಹುಲ್ ತ್ರಿಪಾಠಿ(0) ಮತ್ತು ನಾಯಕ ಸ್ಟೀವ್ ಸ್ಮಿತ್(1) ಅವರನ್ನು ಕಳೆದುಕೊಂಡರೂ, ಬಳಿಕ ಅಜಿಂಕ್ಯ ರಹಾನೆ(56), ಮನೋಜ್ ತಿವಾರಿ(58) ಅರ್ಧಶತಕ ಮತ್ತು ಮಹೇಂದ್ರ ಸಿಂಗ್ ಧೋನಿ ಔಟಾಗದೆ 40 ರನ್(26ಎ, 5ಸಿ) ನೆರವಿನಲ್ಲಿ ಪುಣೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.