×
Ad

ಮಿಸ್ಬಾವುಲ್ ಹಕ್, ಯೂನಿಸ್‌ಖಾನ್‌ಗೆ ಮನಮುಟ್ಟುವ ಸಂದೇಶ ಕಳುಹಿಸಿದ ಯುವರಾಜ್

Update: 2017-05-16 23:11 IST

ಡೊಮಿನಿಕ, ಮೇ 16: ವೆಸ್ಟ್‌ಇಂಡೀಸ್ ಹಾಗೂ ಪಾಕಿಸ್ತಾನದ ನಡುವೆ ಮೂರನೆ ಹಾಗೂ ಅಂತಿಮ ಟೆಸ್ಟ್ ಪಂದ್ಯ ಕೊನೆಗೊಳ್ಳುವ ಜೊತೆಗೆ ಪಾಕಿಸ್ತಾನದ ಇಬ್ಬರು ಶ್ರೇಷ್ಠ ಕ್ರಿಕೆಟಿಗರ ವೃತ್ತಿಜೀವನಕ್ಕೂ ತೆರೆ ಬಿದ್ದಿತ್ತು. ಮಿಸ್ಬಾವುಲ್ ಹಕ್ ಹಾಗೂ ಯೂನಿಸ್‌ಖಾನ್ ಒಟ್ಟಿಗೆ ವೃತ್ತಿಜೀವನ ಕೊನೆಗೊಳಿಸಿದ್ದರು. ಈ ಇಬ್ಬರು ದಿಗ್ಗಜ ಆಟಗಾರರಿಗೆ ಶುಭಾಶಯ ಕೋರಿದ ಭಾರತದ ಆಲ್‌ರೌಂಡರ್ ಯುವರಾಜ್ ಸಿಂಗ್ ಮನಮುಟ್ಟುವ ಸಂದೇಶ ಕಳುಹಿಸಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ತಂಡಗಳು ದೀರ್ಘಸಮಯದಿಂದ ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ. ಆದರೆ, ಉಭಯ ತಂಡಗಳ ಆಟಗಾರರು ಆತ್ಮೀಯ ಸಂಬಂಧ ಹೊಂದಿದ್ದು, ಅದಕ್ಕೆ ಈ ಸಂದೇಶವೇ ಸಾಕ್ಷಿ.

 ‘ಪಾಕಿಸ್ತಾನ ಕ್ರಿಕೆಟ್‌ನ ಇಬ್ಬರು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಿಗೆ ಶುಭ ವಿದಾಯ. ನಾಯಕ ಮಿಸ್ಬಾವುಲ್ ಹಕ್ ಹಾಗೂ ಯೂನಿಸ್ ಖಾನ್ ನೀವು ಕ್ರಿಕೆಟ್‌ಗೆ ನೀಡಿರುವ ಕೊಡುಗೆ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ’ ಎಂದು ಯುವರಾಜ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News