×
Ad

ಮಗನನ್ನು ಮಡಿಲಲ್ಲಿಟ್ಟು ಆಟೋ ಚಲಾಯಿಸುವ ಸಯೀದ್

Update: 2017-05-17 14:15 IST

ಮುಂಬೈ, ಮೇ 17: ಎರಡು ವರ್ಷ ವಯಸ್ಸಿನ ಪುತ್ರನನ್ನು ಮಡಿಲಲ್ಲಿರಿಸಿಕೊಂಡು ಆಟೊಚಾಲಕ ಮುಹಮ್ಮದ್ ಸಯೀದ್ ಮುಂಬೈವೆರ್ಸೊವಾ ಆಟೊ ಸ್ಟಾಂಡ್ ಗೆ ಪ್ರತೀದಿನ ಬರುತ್ತಾರೆ. ಬಿಸಿಲಿನ ತಾಪವಿದ್ದರೂ ಮಗು ತಂದೆಯ ಮಡಿಲಲ್ಲಿ ಕೆಲವೊಮ್ಮೆ ಮಲಗಿ ನಿದ್ರಿಸುತ್ತಿದೆ. ಮುಹಮ್ಮದ್ ಸಯೀದ್ ಈ ಪ್ರಯಾಣವನ್ನು ಹೀಗೆ ಮುಂದುವರಿಸುವಾಗ ಮನೆಯಲ್ಲಿ ಪಕ್ಷವಾತದಿಂದ ಬಳಲುತ್ತಿರುವ ಪತ್ನಿ ಯಾಸ್ಮಿನ್, ಮೂರುತಿಂಗಳ ಇನ್ನೊಂದು ಮಗುವಿಗೆ ಮದ್ದು ಆಹಾರದ ವ್ಯವಸ್ಥೆಯನ್ನು ಸಯೀದ್ ಆಟೊ ಚಲಾಯಿಸಿಯೆ ಮಾಡಿಕೊಡಬೇಕಿದೆ.

ಆಟೊ ಪ್ರಯಾಣದ ನಡುವೆ ತಂದೆಯ ಮಡಿಲಲ್ಲಿ ಮಲಗಿ ನಿದ್ರಿಸುವ ಮಗುವಿನ ಫೋಟೊ ವನ್ನು ಒಬ್ಬ ಪ್ರಯಾಣಿಕ ಟ್ವಿಟರ್‌ಗೆ ಹಾಕಿದ್ದಾನೆ.ಇದು ಈಗ ಸೋಶಿಯಲ್ ಮೀಡಿಯದಲ್ಲಿ ವೈರಲ್ ಅಗಿದೆ. ಪಕ್ಷವಾತದಿಂದ ಮನೆಯಲ್ಲಿ ಮಲಗಿದ್ದಲ್ಲೆ ಆದ ಪತ್ನಿಯ ಬಳಿ ಎರಡು ವರ್ಷದ ಮಗುವನ್ನು ಇರಿಸಿ ಆಟೊ ಚಲಾಯಿಸಲು ಬರಲು ಸಾಧ್ಯವಿಲ್ಲ. ಆದ್ದರಿಂದ ಮಗನನ್ನು ಜೊತೆ ಕರೆದುಕೊಂಡು ಬರುತ್ತಿದ್ದೇನೆ ಎಂದು ಸಯೀದ್ ಹೇಳುತ್ತಾರೆ. ತನ್ನ ಇನ್ನೊಂದು ಮಗುವನ್ನು ನೆರೆಮನೆಯಲ್ಲಿ ಇರಿಸಿ ಕೆಲಸಕ್ಕೆ ಬರುತ್ತಿದ್ದಾರೆ ಸಯೀದ್. ಪತ್ರಕರ್ತ ವಿನೋದ್ ಕಾಫ್ರಿತನ್ನ ಟ್ವಿಟರ್ ಪುಟದಲ್ಲಿ ಸಯೀದ್ ಮತ್ತು ಅವರ ಪುತ್ರನ ಪೋಟೊ ಪೋಸ್ಟ್ ಮಾಡಿದ ಬಳಿಕ ಸಯೀದ್‌ಗೆ ನೆರವಿನ ಹಸ್ತಚಾಚಲು ಹಲವಾರು ಮಂದಿ ಮುಂದೆಬಂದಿದ್ದಾರೆ.

 ಪ್ರತಿದಿವಸ ಸಯೀದ್ ಮಗುವಿನೊಂದಿಗೆ ಆಟೊ ಚಲಾಯಿಸುತ್ತಿದ್ದಾರೆ. ಅದು ಅವರಿಗೆ ಅನಿವಾರ್ಯ. ಮಗು ಮಡಿಲಲ್ಲಿರುವುದನ್ನುನೋಡಿ ಏನಾದರೂ ಕೊಡಬೇಕಾದೀತೆ ಎಂದು ಕೆಲವುಪ್ರಯಾಣಿಕರು ಬೇರೆ ಆಟೊದಲ್ಲಿ ಹೋದ ಅನುಭವವೂ ಸಯೀದ್‌ರಿಗಾಗಿದೆ. ತಾನು ಯಾರನ್ನೂ ವಂಚಿಸಿಲ್ಲ ಆದ್ದರಿಂದ ಎಲ್ಲವೂ ಸರಿಯಾಗಬಹುದು ಎನ್ನುವ ವಿಶ್ವಾಸವನ್ನು ಸಯೀದ್ ವ್ಯಕ್ತಪಡಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News