×
Ad

ಶ್ವೇತಭವನದ ಬೇಲಿ ಜಿಗಿಯಲು ಯತ್ನಿಸಿದ ಮಹಿಳೆಯ ಬಂಧನ

Update: 2017-05-17 20:30 IST

ವಾಶಿಂಗ್ಟನ್,ಮೇ 17: ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸವಾದ ಶ್ವೇತಭವನದ ಆವರಣ ಬೇಲಿಯನ್ನು ಹತ್ತಲು ಯತ್ನಿಸುತ್ತಿದ್ದ ಮಹಿಳೆಯೊಬ್ಬಳನ್ನು ಅಮೆರಿಕದ ಬೇಹುಗಾರಿಕ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿದ್ದ ವೇಳೆಯಲ್ಲೇ ಈ ಘಟನೆ ನಡೆದಿದೆ.

ಸೋಮವಾರ ಶ್ವೇತಭನನದ ಉತ್ತರಭಾಗದ ಬೇಲಿಯನ್ನು ಜಿಗಿದ ಮಹಿಳೆಯನ್ನು ಕಸ್ಟಡಿಯಲ್ಲಿರಿಸಲಾಗಿದೆಯೆಂದು ಬೇಹುಗಾರಿಕಾ ದಳವು ಟ್ವೀಟ್ ಮಾಡಿದೆ. ಘಟನೆ ನಡೆದ ಬೆನ್ನಲ್ಲೇ ಪೆನ್ಸಿಲ್ವೆನಿಯಾ ಅವೆನ್ಯೂ ರಸ್ತೆಯ ಉತ್ತರದ ಆವರಣಬೇಲಿಯ ಸಮೀಪದ ರಸ್ತೆಯನ್ನು ಮುಚ್ಚುಗಡೆಗೊಳಿಸಲಾಗಿತ್ತು ಎಂದು ಅದು ಹೇಳಿದೆ. ಶಂಕಿತಳ ವಿರುದ್ಧ ಅತಿಕ್ರಮ ಪ್ರವೇಶದ ಆರೋಪವನ್ನು ಹೊರಿಸಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಶ್ವೇತಭವನದ ಬೇಲಿಯನ್ನು ಹತ್ತಲು ಯತ್ನಿಸಿದ ಕೆಲವು ಪ್ರಕರಣಗಳು ಕಳೆದ ಕೆಲವು ತಿಂಗಳುಗಳಲ್ಲಿ ವರದಿಯಾಗಿವೆ.

ಮಾರ್ಚ್ 10ರಂದು ಕ್ಯಾಲಿಫೋರ್ನಿಯಾದ ನಿವಾಸಿಯೊಬ್ಬ ಶ್ವೇತಭವನದ ಸಮೀಪದ ತಡೆಬೇಲಿಗಳನ್ನು ಹತ್ತುವಲ್ಲಿ ಯಶಸ್ವಿಯಾಗಿದ್ದ ಹಾಗೂ ಆತ ಸುಮರು 17 ನಿಮಿಷಗಳವರೆಗೆ ಶ್ವೇತಭವನದ ಹುಲ್ಲುಹಾಸಿನಲ್ಲಿ ಉಳಿದುಕೊಂಡಿದ್ದ ಆತನನ್ನು ಆನಂತರ ಭದ್ರತಾ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಬೇಹುಗಾರಿಕಾ ದಳವು ಈಗಲೂ ತನಿಖೆಯನ್ನು ಮುಂದುವರಿಸಿದೆ ಹಾಗೂ ಈ ಸಂಬಂಧ ಕನಿಷ್ಠ ಇಬ್ಬರು ಅಧಿಕಾರಿಗಳನ್ನು ಉಚ್ಚಾಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News