×
Ad

ಶ್ವೇತಭವನದಲ್ಲಿ ಸುದ್ದಿಗೋಷ್ಟಿ ನಿಷೇಧಕ್ಕೆ ಟ್ರಂಪ್ ಬೆಂಬಲಿಗ ಗಿಂಗ್ರಿಚ್ ಪಟ್ಟು

Update: 2017-05-17 20:40 IST

ವಾಶಿಂಗ್ಟನ್,ಮೇ 17: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಬಲ ಬೆಂಬಲಿಗ, ಅಮೆರಿಕ ಕಾಂಗ್ರೆಸ್‌ನ ಮಾಜಿ ಸ್ಪೀಕರ್ ನ್ಯೂಟ್ ಗಿಂಗ್ರಿಚ್ ಅವರು ಶ್ವೇತಭವನದ ದೈನಂದಿನ ಸುದ್ದಿಗೋಷ್ಠಿಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದ್ದಾರೆ. ಮಾಧ್ಯಮಗಳು ಈಗ ಭ್ರಷ್ಟವಾಗಿವೆ ಹಾಗೂ ಅಮೆರಿಕ ಅಧ್ಯಕ್ಷರ ಅಪ್ರಾಮಾಣಿಕ ವಿರೋಧಿಗಳಾಗಿವೆಯೆಂದು ಅವರು ಟೀಕಿಸಿದಾದರೆ.

‘‘ನಾನು ವೈಯಕ್ತಿಕವಾಗಿ ಮಾಧ್ಯಮಗಳಿಂದ ನೊಂದಿದ್ದೇನೆ. ಅವು ವಿನಾಶಕಾರಿ ಹಾಗೂ ಜಿಗುಪ್ಸೆ ಹುಟ್ಟಿಸುವಂತಹದ್ದಾಗಿವೆ.ಸದ್ಯ ಅವರು ದೇಶಕ್ಕೆ ಅಪಾಯಕಾರಿಯಾಗಿವೆ’’ ಎಂದು ಗಿಂಗ್ರಿಚ್ ಕಿಡಿಕಾರಿದ್ದಾರೆ. ಶ್ವೇತಭವನದದಲ್ಲಿ ದೈನಂದಿನ ಸುದ್ದಿಗೋಷ್ಠಿಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದ ಅವರು ಪತ್ರಿಕಾ ಕಾರ್ಯದರ್ಶಿ ಸೀನ್ ಸ್ಪೈಸರ್ ಮಾಧ್ಯಮಗಳ ಬದಲು ಅಮೆರಿಕದ ಜನತೆಗೆ ನೇರವಾಗಿ ಉತ್ತರಿಸಬೇಕೆಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News