ಮೇ 23: ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಮಾಹಿತಿ ಕಾರ್ಯಾಗಾರ ಮತ್ತು ವ್ಯಕ್ತಿತ್ವ ವಿಕಸನ ಶಿಬಿರ

Update: 2017-05-17 18:31 GMT

ಮಂಗಳೂರು, ಮೇ 17: ಪಿ.ಎ. ಎಜ್ಯುಕೇಶನಲ್ ಟ್ರಸ್ಟ್ ವತಿಯಿಂದ ಮೇ 23ರಂದು ‘ಎಕ್ಸ್‌ಫ್ಲೋರ್ ಯುವರ್ ಮೈಂಡ್’ ಮತ್ತು ವೃತ್ತಿಪರ ವಿದ್ಯಾಭ್ಯಾಸದ ಅವಕಾಶಗಳು ಎಂಬ ವಿಷಯದಲ್ಲಿ ಒಂದು ದಿವಸದ ಉಚಿತ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರವು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಜರಗಲಿರುವುದು. ಭಾಗವಹಿಸುವ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ, ಉಚಿತ ಬಸ್ ಮತ್ತು ಉಪಹಾರದ ವ್ಯವಸ್ಥೆ ಮಾಡಲಾಗುವುದು.

 ಶಿಬಿರದಲ್ಲಿ ಏಕಾಗ್ರತೆ, ಕಲಿಕೆಯ ವಿವಿಧ ತಂತ್ರಗಾರಿಕೆ, ಗುಣಾತ್ಮಕ ಚಿಂತನೆಗಳು, ಜ್ಞಾಪಕ ಶಕ್ತಿ ವೃದ್ಧಿಸುವಿಕೆ, ಹಿಪ್ನೋಸಿಸ್ ಹಾಗೂ ಇನ್ನಿತರ ಕಲಿಕಾ ಕೌಶಲ್ಯಗಳ ಮಾಹಿತಿ ನೀಡಲಾಗುವುದು.

ಶಿಬಿರವನ್ನು ಸಂಸ್ಥೆಯ ಶೈಕ್ಷಣಿಕ ವಿಭಾಗದ ನಿರ್ದೇಶಕ ಪ್ರೊ. ಸರ್ಫ್‌ರಾಜ್ ಹಾಶಿಮ್ ನಡೆಸಿಕೊಡಲಿದ್ದಾರೆ. ಇದರೊಂದಿಗೆ ವೃತ್ತಿಪರ ಶಿಕ್ಷಣ ಅವಕಾಶಗಳ ಮಾಹಿತಿ ಯನ್ನೂ ನೀಡಲಾಗುವುದು.

ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಮೊ.ಸಂ.-9036994405/9886598946 ಗೆ ಎಸ್ಸೆಮ್ಮೆಸ್/ವ್ಯಾಟ್ಸ್‌ಆ್ಯಪ್ ಮಾಡಬಹುದು ಅಥವಾ sep@pace.edu.in

ಗೆ ಇ ಮೇಲ್ ಮಾಡಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News