ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ದವೆ ನಿಧನ
Update: 2017-05-18 10:10 IST
ಹೊಸದಿಲ್ಲಿ, ಮೇ 18: ಕೇಂದ್ರ ಪರಿಸರ ಖಾತೆಯ ರಾಜ್ಯ ಸಚಿವ ಅನಿಲ್ ಮಾಧವ್ ದವೆ (61) ಇಂದು ಬೆಳಗ್ಗೆ ನಿಧನರಾದರು.
ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅವರು ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು.
ಮಧ್ಯಪ್ರದೇಶದ ಉಜ್ಜೈನಿ ಬಂದ್ ನಗರದಲ್ಲಿ 1956 , ಜುಲೈ 6ರಂದು ಜನಿಸಿದ್ದ ದವೆ 2009ರಲ್ಲಿ ರಾಜ್ಯಸಭೆ ಪ್ರವೇಶಿಸಿದ್ದರು.
ಆರ್ ಎಸ್ ಎಸ್ ನಲ್ಲಿ ಹಲವು ವರ್ಷಗಳ ಕಾಲ ದವೆ ಸೇವೆ ಸಲ್ಲಿಸಿದ್ದರು.ನರ್ಮದಾ ನದಿ ಸಂರಕ್ಷಣೆಯ ಆಂದೋಲನದಲ್ಲಿ ಸಕ್ರೀಯರಾಗಿ ದುಡಿದಿದ್ದರು
“ನನ್ನ ಸ್ನೇಹಿತ ಹಾಗೂ ಗೌರವಾನ್ವಿತ ಸಹೋದ್ಯೋಗಿ ಅನಿಲ್ ಮಾಧವ್ ಜಿಯವರ ನಿಧನದಿಂದ ತೀವ್ರ ಆಘಾತಕ್ಕೊಳಗಾಗಿದ್ದೇನೆ. ನಿನ್ನೆ ಸಂಜೆಯವರೆಗೂ ನಾನು ಅವರ ಜೊತೆಗಿದ್ದೆ” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಸಂತಾಪ ಸೂಚಿಸಿದ್ದಾರೆ.