ತಲಾಖ್ ನ ಸಿಂಧುತ್ವಕ್ಕಾಗಿ ಕೋರ್ಟಿನ ಮೊರೆಹೋದವನ ಅರ್ಜಿ ತಿರಸ್ಕೃತ

Update: 2017-05-18 09:26 GMT

ಮಲಪ್ಪುರಂ,ಮೇ 18: ತಲಾಖನ್ನು ಸಿಂಧುಗೊಳಿಸಬೇಕು ಎಂದು ಆಗ್ರಹಿಸಿ ಪತಿಮಹಾಶಯನೊಬ್ಬ ಸಲ್ಲಿಸಿದ ಅರ್ಜಿಯನ್ನು ಕುಟುಂಬ ಕೋರ್ಟು ತಿರಸ್ಕರಿಸಿದೆ. ಇಸ್ಲಾಮೀ ಕಾನೂನುಪ್ರಕಾರ ತಲಾಖ್ ಪ್ರಕ್ರಿಯೆ ನಡೆದಿಲ್ಲ ಎಂಬಂಶವನ್ನು ಎತ್ತಿಹಿಡಿದು ಕೋರ್ಟು ಅರ್ಜಿಯನ್ನು ತಳ್ಳಿಹಾಕಿದೆ. ಮಲಪ್ಪುರಂ ಅರಿಕ್ಕೋಡ್ ಎಂಬಲ್ಲಿನ ಮಹಿಳೆ ಮತ್ತು ತನ್ನ ವಿವಾಹ ವಿಚ್ಛೇದನವನ್ನು ಊರ್ಜಿತಗೊಳಿಸಬೇಕೆಂದು ಅರ್ಜಿದಾರ ವಾದಿಸಿದ್ದರು. ಪವಿತ್ರಕುರ್‌ಆನ್ ಪ್ರಕಾರ ವಿವಾಹ ವಿಚ್ಛೇದನಕ್ಕೆ ಸಾಕಷ್ಟು ಕಾರಣಗಳು ಬೇಕು. ತಲಾಖ್ ಆಗುವ ಮೊದಲು ಇಬ್ಬರ ನಡುವೆ ಬೇರೊಬ್ಬರ ಮಧ್ಯಸ್ಥಿಕೆಯಿಂದ ವಿವಾದ ಇತ್ಯರ್ಥ ಮಾಡುವ ಪ್ರಯತ್ನ ಆಗಬೇಕಿದೆ. ಆದರೆ ಇದನ್ನು ಸಾಬೀತುಪಡಿಸಲು ಅರ್ಜಿದಾರ ಪತಿವಿಫಲನಾಗಿದ್ದಾನೆ. ಕೇವಲ ನಿಮ್ಮಿಬ್ಬರ ನಡುವೆ ತಲಾಖ್ ಪ್ರಕ್ರಿಯೆ ಆಗಿದೆ.ಆದ್ದರಿಂದ ಅದು ಸಿಂಧುವಲ್ಲ ಎಂದು ಮಲಪ್ಪುರಂ ಕುಟುಂಬ ನ್ಯಾಯಾಲಯದ ಜಡ್ಜ್ ರಮೇಶ್‌ಭಾಯಿ ತೀರ್ಪಿತ್ತುಅರ್ಜಿಯನ್ನು ತಿರಸ್ಕರಿಸಿದ್ದಾರೆ.

1994ರಲ್ಲಿ ಇಬ್ಬರ ಮದುವೆ ಆಗಿತ್ತು. ಕೆಲವು ವರ್ಷದ ಬಳಿಕ ಪತಿ ಮಹಿಳೆಯನ್ನು ತೊರೆದಿದ್ದಾನೆ. ಮಹಿಳೆ ಪತಿಯ ವಿರುದ್ಧ 2008ರಲ್ಲಿ ಕುಟುಂಬ ಕೋರ್ಟಿನ ಮೊರೆ ಹೋಗಿದ್ದರು. ಕೋರ್ಟು ಮಹಿಳೆಗೆ ಜೀವನಾಂಶವನ್ನು ಕೊಡಿಸಿತ್ತು.2012ರಲ್ಲಿ ಯುವಕ ತಲಾಖ್ ಕೊಟ್ಟು ದಾಖಲೆಗಳನ್ನು ಒದಗಿಸಿದ್ದರೂ ಅದನ್ನು ಕೋರ್ಟು ಇಸ್ಲಾಮೀ ಕಾನೂನು ಪ್ರಕಾರ ತಲಾಖ್ ಆಗಿಲ್ಲ ಎಂದು ಅದನ್ನು ತಿರಸ್ಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News