ದುಷ್ಕರ್ಮಿಗಳಿಂದ ಅಂಬೇಡ್ಕರ್ ಪ್ರತಿಮೆ ತೆರವು: ಹರ್ಯಾಣದ ಗ್ರಾಮದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣ

Update: 2017-05-18 18:24 GMT

ಹರ್ಯಾಣ, ಮೇ 18: ಕೆಲ ದುಷ್ಕರ್ಮಿಗಳು ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ತೆರವುಗೊಳಿಸಿದ ನಂತರ ಹರ್ಯಾಣದ ತಾರಕಾ ಗ್ರಾಮದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಹೆಚ್ಚಿನ ಅನಾಹುತಗಳು ನಡೆಯದಂತೆ ತಡೆಯಲು ಭದ್ರತಾ ಪಡೆಗಳನ್ನು ಸ್ಥಳೀಯ ಆಡಳಿತ ನೇಮಿಸಿದೆ ಎಂದು ಎಸ್ಪಿ ಸುಲೋಚನಾ ಗಜ್ ರಾಜ್ ಹೇಳಿದ್ದಾರೆ.

ಎಪ್ರಿಲ್ 8ರಂದು ಅಂಬೇಡ್ಕರರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಅದನ್ನು ತೆರವುಗೊಳಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿದ್ದಾರೆ.

“ಅನುಮತಿಯಿಲ್ಲದೆ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂದು ಗ್ರಾಪಂ ಆಡಳಿತ ಹೇಳಿರುವುದಾಗಿ ಎಸ್ ಡಿಎಂ ಎಸ್.ಕೆ.ಚಾಹಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News