ಕಲ್ಲಿದ್ದಲು ಹಗರಣ; ಗುಪ್ತಾ ಸೇರಿದಂತೆ ಮೂವರು ಉನ್ನತಾಧಿಕಾರಗಳ ವಿರುದ್ಧ ಆರೋಪ ಸಾಬೀತು
Update: 2017-05-19 11:47 IST
ಹೊಸದಿಲ್ಲಿ, ಮೇ 19: ಕಲ್ಲಿದ್ದಲು ಹಗರಣ ಸಂಬಂಧ ವಿಚಾರಣೆ ನಡೆಸಿದ್ದ ಸಿಬಿಐ ವಿಶೇಷ ಕೋರ್ಟ್ ತನ್ನ ತೀರ್ಪು ಪ್ರಕಟಿಸಿದ್ದು, ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಹೆಚ್ ಸಿ ಗುಪ್ತಾ ಸೇರಿದಂತೆ ಮೂವರು ಉನ್ನತ ಅಧಿಕಾರಗಳ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಕಲ್ಲಿದ್ದಲು ನಿಕ್ಷೇಪವನ್ನು ಅಕ್ರಮವಾಗಿ ಹಂಚಿಕೆ ಮಾಡಿರುವ ಪ್ರಕರಣದಲ್ಲಿ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಹೆಚ್.ಸಿ. ಗುಪ್ತಾ, ಜಂಟಿ ಕಾರ್ಯದರ್ಶಿ ಕೆ.ಎಸ್ ಕ್ರೋಪಾಹ , ನಿರ್ದೇಶಕ ಕೆ.ಸಿ.ಸಮ್ರಿಯಾ ವಿರುದ್ಧ ಪ್ರಕರಣ ದಾಖಲಾಗಿತ್ತು.
2006ರಿಂದ 2009ರವರೆಗೆ ಪ್ರಧಾನಿ ಡಾ.ಮನಮೋಹನ್ ಸಿಂಗ್ ಕಲ್ಲಿದ್ದಲು ಖಾತೆಯನ್ನು ತನ್ನ ಬಳಿಯೇ ಇರಿಸಿಕೊಂಡಿದ್ದ ಸಂದರ್ಭ ಗುಪ್ತಾ ಕಲ್ಲಿದ್ದಲು ಖಾತೆ ಕಾರ್ಯದರ್ಶಿಯಾಗಿದ್ದರು. 2008ರಲ್ಲಿ ಗುಪ್ತಾ ನಿವೃತ್ತರಾಗಿದ್ದರು.