ಕಲ್ಲಿದ್ದಲು, ಸೋಲಾರ್ ಮೇಲೆ ಜಿಎಸ್‌ಟಿ ದರದಿಂದ ಶುಲ್ಕದ ಮೇಲೆ ಪರಿಣಾಮವಿಲ್ಲ: ಪಿಯೂಷ್ ಗೋಯಲ್

Update: 2017-05-19 16:57 GMT

ಹೊಸದಿಲ್ಲಿ,ಮೇ 19: ಕಲ್ಲಿದ್ದಲಿಗೆ ಶೇ.5 ಕನಿಷ್ಠ ತೆರಿಗೆಯನ್ನು ವಿಧಿಸುವ ಜಿಎಸ್‌ಟಿ ಮಂಡಳಿಯ ನಿರ್ಧಾರವನ್ನು ಶುಕ್ರವಾರ ಇಲ್ಲಿ ಸ್ವಾಗತಿಸಿದ ಕೇಂದ್ರ ವಿದ್ಯುತ್ ಮತ್ತು ಕಲ್ಲಿದ್ದಲು ಸಚಿವ ಪಿಯೂಷ್ ಗೋಯಲ್ ಅವರು, ಇದರಿಂದಾಗಿ ವಿದ್ಯುತ್ ವೆಚ್ಚಗಳು ತಗ್ಗಲಿವೆ ಎಂದು ಹೇಳಿದರು.

ಇಡೀ ಜಿಎಸ್‌ಟಿ ವ್ಯವಸ್ಥೆಯು ಸರಕುಗಳ ಬೆಲೆಗಳನ್ನು ತಗ್ಗಿಸುವ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಒಂದು ರಾಷ್ಟ್ರ ಒಂದು ತೆರಿಗೆ ಉದ್ದೇಶವನ್ನು ಹೊಂದಿವೆ. ಜಿಎಸ್‌ಟಿ ಮಂಡಳಿಯು ಕಲ್ಲಿದ್ದಲಿಗೆ ಶೇ.5ರ ಕನಿಷ್ಠ ತೆರಿಗೆ ನಿಗದಿಗೊಳಿಸಿರುವುದು ಖುಷಿಯ ವಿಷಯವಾಗಿದೆ, ಇದು ವೆಚ್ಚಗಳನ್ನು ತಗ್ಗಿಸುವಲ್ಲಿ ನೆರವಾಗಲಿದೆ ಎಂದು ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು ತಿಳಿಸಿದರು.

ಕಲ್ಲಿದ್ದಲಿನ ಮೇಲೆ ಹಾಲಿ ಶೇ.11.69 ತೆರಿಗೆಯ ಬದಲಿಗೆ ಶೇ.5 ತೆರಿಗೆಯನ್ನು ವಿಧಿಸಲು ಜಿಎಸ್‌ಟಿ ಮಂಡಳಿಯು ಗುರುವಾರ ನಿರ್ಧರಿಸಿತ್ತು.
 ಆದರೆ ಸೋಲಾರ್ ಮಾಡ್ಯೂಲ್‌ಗಳಿಗೆ ಶೇ.18 ತೆರಿಗೆ ವಿಧಿಸಿರುವುದು ಸೌರ ವಿದ್ಯುತ್ ಶುಲ್ಕಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಆತಂಕವನ್ನು ತಳ್ಳಿಹಾಕಿದ ಅವರು, ಸೌರ ವಿದ್ಯುತ್ ಶುಲ್ಕಗಳು ಯೋಜನೆಯಿಂದ ಯೋಜನೆಗೆ ಬೇರೆಯಾಗಿರುತ್ತವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News