ಝಾಕಿರ್ ನಾಯ್ಕ್ ಗೆ ಸೌದಿ ಪೌರತ್ವ ನೀಡಿದ ದೊರೆ ಸಲ್ಮಾನ್

Update: 2017-05-20 08:25 GMT

ಹೊಸದಿಲ್ಲಿ, ಮೇ 19: ಸೌದಿ ಅರೇಬಿಯಾದ ದೊರೆ ಸಲ್ಮಾನ್ ಅವರು ಇಸ್ಲಾಮಿಕ್ ವಾಗ್ಮಿ ಡಾ. ಝಾಕಿರ್ ನಾಯ್ಕ್ ಅವರಿಗೆ ತನ್ನ ದೇಶದ ಪೌರತ್ವವನ್ನು ಮಂಜೂರು ಮಾಡಿದ್ದಾರೆ. ಇಂಟರ್‌ಪೋಲ್‌ನಿಂದ ನಾಯ್ಕ್ ಬಂಧನವನ್ನು ತಪ್ಪಿಸಲು ಅವರಿಗೆ ಪೌರತ್ವ ನೀಡುವಲ್ಲಿ ದೊರೆ ಮಧ್ಯಪ್ರವೇಶ ಮಾಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಭಯೋತ್ಪಾದನೆ ಸಂಬಂಧಿತ ಪ್ರಕರಣ ಮತ್ತು ಹಣ ಚಲುವೆ ಆರೋಪಗಳಿಗೆ ಸಂಬಂಧಿಸಿದಂತೆ ಭಾರತದ ನ್ಯಾಯಾಲಯವು ನಾಯ್ಕಾ ವಿರುದ್ಧ ಎರಡನೇ ವಾರಂಟ್ ಹೊರಡಿಸಿತ್ತು. ಆ ಸಂದರ್ಭ ವಿದೇಶ ಪ್ರವಾಸದಲ್ಲಿದ್ದ ನಾಯ್ಕಾ ಭಾರತಕ್ಕೆ ಮರಳದಿರಲು ನಿರ್ಧರಿಸಿದ್ದರು ಮತ್ತು ಮಲೇಶಿಯಾದಲ್ಲಿ ಉಳಿಯಲು ನಿರ್ಧರಿಸಿದ್ದರು. ಅಲ್ಲಿಯ ಸರಕಾರವು ಐದು ವರ್ಷಗಳ ಹಿಂದೆ ಅವರಿಗೆ ಕಾಯಂ ನಿವಾಸಿ ದರ್ಜೆಯನ್ನು ನೀಡಿತ್ತು.

ಢಾಕಾ ರೆಸ್ಟೋರಂಟ್ ಮೇಲೆ ಭಯೋತ್ಪಾದಕ ದಾಳಿಯ ಕೆಲವು ಆರೋಪಿಗಳು ತಾವು ನಾಯ್ಕ್ ಭಾಷಣಗಳಿಂದ ಪ್ರೇರಿತರಾಗಿದ್ದೆವು ಎಂದು ವಿಚಾರಣೆ ವೇಳೆ ತಿಳಿಸಿದ್ದು, ಆ ಬಳಿಕ ನಾಯ್ಕ್ ಭಾರತವನ್ನು ತೊರೆದಿದ್ದರು.

ನಾಯ್ಕ್ ಅವರ ಪಾಸ್‌ಪೋರ್ಟ್‌ನ್ನು ರದ್ದುಗೊಳಿಸಲು ಮತ್ತು ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸುವಂತೆ ಇಂಟರ್‌ಪೋಲ್ ಅನ್ನು ಕೋರಿಕೊಳ್ಳಲು ಭಾರತೀಯ ಕಾನೂನು ಜಾರಿ ಸಂಸ್ಥೆಗಳು ಮುಂದಾಗಿದವು.

ಈ ವೇಳೆಗಾಗಲೇ ಸೌದಿ ಅರೇಬಿಯಕ್ಕೆ ತೆರಳಿದ್ದ ನಾಯ್ಕೆರ ಪಾಸ್‌ಪೋರ್ಟ್ ರದ್ದುಗೊಂಡರೆ ಅವರು ಭಾರತಕ್ಕೆ ಮರಳುವುದು ಅನಿವಾರ್ಯವಾಗುತ್ತಿತ್ತು. ಸೌದಿ ಅರೇಬಿಯಾ ನಾಯ್ಕ್ ಅವರಿಗೆ ಪೌರತ್ವ ನೀಡಬಹುದು ಎನ್ನುವುದನ್ನು ನಿರೀಕ್ಷಿಸಿರದಿದ್ದ ಮುಂಬೈ ಪಾಸ್‌ಪೋರ್ಟ್ ಕಚೇರಿಯು ಅವರ ಪಾಸ್‌ಪೋರ್ಟ್ ರದ್ದುಗೊಳಿಸುವ ಕ್ರಮಕ್ಕೆ ಮುಂದಾಗಿದ್ದರೆ, ವಿಶೇಷ ನ್ಯಾಯಾಲಯವೊಂದು ಅವರ ಬಂಧನಕ್ಕೆ ವಾರಂಟ್ ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News