ಪೀಕ್ ಅವರ್‌ನಲ್ಲಿ ವಿಶೇಷ ಬಸ್ ಸೌಕರ್ಯ ಕಲಿ್ಪಸಲು ಆಗ್ರಹ

Update: 2017-05-19 18:37 GMT

 ಮಂಗಳೂರು, ಮೇ 19: ನಗರದಲ್ಲಿ ಮಹಿಳೆಯರಿಗಾಗಿ ಬೆಳಗ್ಗೆ ಮತ್ತು ಸಂಜೆ ಪೀಕ್ ಆವರ್‌ಗಳಲ್ಲಿ ವಿಶೇಷ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದು ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ನಡೆದ ಪೊಲೀಸ್ ನೇರ ೆನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಲಹೆ ನೀಡಿದರು.

ಸ್ಟೇಟ್‌ಬ್ಯಾಂಕ್- ಬಿಜೈ- ಬೋಂದೆಲ್ ಮತ್ತು ಕೆಲವು ಆಯ್ದ ಮಾರ್ಗಗಳಲ್ಲಿ ಪೀಕ್ ಆವರ್‌ನಲ್ಲಿ ಪ್ರಯಾ ಣಿಕರ ಒತ್ತಡ ಜಾಸ್ತಿ ಇದೆ. ಮಹಿಳೆಯರಿಗೆ ಬಸ್ ಹತ್ತಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮಹಿಳೆಯರಿಗಾಗಿ ವಿಶೇಷ ಬಸ್‌ಗಳನ್ನು ವ್ಯವಸ್ಥೆ ಮಾಡುವ ಆವಶ್ಯಕತೆ ಇದೆ ಎಂದು ಆಗ್ರಹಿಸಿದರು. ಇದನ್ನು ಸಾರಿಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಟ್ರಾಫಿಕ್ ವಿಭಾಗದ ಎಸಿಪಿ ತಿಲಕ್‌ಚಂದ್ರ ತಿಳಿಸಿದರು. ಸಿಂಗಲ್ ಸೈಟ್ ಖರೀದಿಸಿ ಮನೆ ಕಟ್ಟಿಸುವವರು ರಸ್ತೆಗಾಗಿ ಜಾಗವನ್ನು ದಾಖಲೆ ಪತ್ರದಲ್ಲಿ ಮಾತ್ರ ತೋರಿ ಸುತ್ತಾರೆ. ಬಳಿಕ ರಸ್ತೆಗಾಗಿ ಕಾದಿರಿಸಿದ ಜಾಗದಲ್ಲಿ ಗಿಡ ನೆಡುತ್ತಾರೆ ಅಥವಾ ವಾಹನ ಶೆಡ್ ನಿರ್ಮಿಸುತ್ತಾರೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಆವರಣಗೋಡೆಯನ್ನು ನಿರ್ಮಿಸುತ್ತಾರೆ ಎಂದು ವ್ಯಕ್ತಿಯೊಬ್ಬರು ದೂರಿದರು. ಆರ್‌ಟಿಒ ಕಚೇರಿಗೆ ಸಂಬಂಧಿಸಿ ಹಲವಾರು ಸಮಸ್ಯೆ ಗಳಿದ್ದು, ಸಾರಿಗೆ ಇಲಾಖೆಯ ಅಧಿಕಾರಿಗಳು ೆನ್ ಇನ್ ಕಾರ್ಯಕ್ರಮ ನಡೆಸ ಬೇಕೆಂಬ ಸಲಹೆಯೂ ಕೇಳಿ ಬಂತು. *ತಕ್ಷಣ ಸ್ಪಂದನೆ:

 ಬರ್ಕೆ ಪೊಲೀಸರು ಮುಟ್ಟುಗೋಲು ಹಾಕಿದ ಲಾರಿಯೊಂದನ್ನು ಕೆಲವು ಸಮಯದಿಂದ ಠಾಣೆಯ ಎದುರು ರಸ್ತೆ ಬದಿ ನಿಲ್ಲಿಸಿದ್ದು, ಅದು ಸುಗಮ ವಾಹನ ಸಂಚಾರಕ್ಕೆ ಅಡೆ ತಡೆ ಉಂಟು ಮಾಡುತ್ತಿದೆ ಎಂದು ಸಾರ್ವಜನಿಕರೊಬ್ಬರು ತಿಳಿಸಿದರು. ಡಿಸಿಪಿ ಕೆ.ಎಂ. ಶಾಂತರಾಜು ತಕ್ಷಣ ಬರ್ಕೆ ಪೊಲೀಸರಿಗೆ ವೈರ್‌ಲೆಸ್ ಮುಖಾಂತರ ಮಾಹಿತಿ ನೀಡಿ, ಲಾರಿಯನ್ನು ಕೂಡಲೇ ತೆರವುಗೊಳಿಸುವಂತೆ ಸೂಚಿಸಿದರು. *ಗೂರ್ಖಾ ಸಮಸ್ಯೆ: ನಗರದ ಕೆಲವು ಕಡೆ ರಾತ್ರಿ ಕಾವಲು ಕಾಯಲು ಗೂರ್ಖಾ ವ್ಯವಸ್ಥೆ ಇದ್ದು, ಆತ ಪ್ರತಿ ತಿಂಗಳ ಮೊದಲ ದಿನ ಮನೆ ಮನೆಗೆ ಭೇಟಿ ನೀಡಿ ಹಣ ಸಂಗ್ರಹ ಮಾಡುತ್ತಾನೆ. ಆತನನ್ನು ನೇಮಕ ಮಾಡಿದ್ದು ಯಾರು ಎಂದು ಸಾರ್ವಜನಿಕರೊಬ್ಬರು ಪ್ರಶ್ನಿಸಿದರು. ಡಿಸಿಪಿ ಕೆ.ಎಂ. ಶಾಂತರಾಜು ಪ್ರತಿಕ್ರಿಯಿಸಿ ಪೊಲೀಸ್ ಇಲಾಖೆಯಿಂದ ಯಾವುದೇ ಗೂರ್ಖಾನನ್ನು ನೇಮಕ ಮಾಡಿಲ್ಲ. ಆತನಿಗೆ ಹಣ ಕೊಡಬೇಕೆಂದು ಇಲಾಖೆ ತಿಳಿಸಿಲ್ಲ. ಈ ಬಗ್ಗೆ ಸಮಸ್ಯೆಗಳೇನಾದರೂ ಇದ್ದರೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು ಎಂದರು.

*ಟೋಲ್ ಗೇಟ್ ಸಮಸ್ಯೆ: ತಲಪಾಡಿ ಟೋಲ್ ಗೇಟ್‌ನಲ್ಲಿ ಬೆಳಗ್ಗೆ ಮತ್ತು ಸಂಜೆ ಹೊತ್ತು ವಾಹನಗಳ ಒತ್ತಡ ಜಾಸ್ತಿ ಇರುವ ಸಂದರ್ಭ ಎರಡು ಗೇಟ್‌ಗಳನ್ನು ಮುಚ್ಚಲಾಗುತ್ತಿದೆ. ಈ ಬಗ್ಗೆ ವಿಚಾರಿಸಿದರೆ ಸಿಬ್ಬಂದಿ ಉಡಾೆ ಮಾತನಾಡುತ್ತಾರೆ. ಅನಧಿಕೃತ ವ್ಯಕ್ತಿಗಳು ಕುಡಿದು ಬಂದು ವಾಹನ ಚಾಲಕರ ಜತೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಸಾರ್ವಜನಿಕರು ದೂರಿದರು. ಮುಂದೆ ಇಂತಹ ಘಟನೆ ಸಂಭವಿಸಿದರೆ ಪೊಲೀಸ್ ಕಂಟ್ರೋಲ್ ರೂಂಗೆ ೆನ್ ಮಾಡಿ ಮಾಹಿತಿ ನೀಡುವಂತೆ ಡಿಸಿಪಿ ತಿಳಿಸಿದರು. *ಹೆದ್ದಾರಿಯಲ್ಲಿ ವಾಹನ ನಿಲುಗಡೆ: ತೊಕ್ಕೊಟ್ಟು ಓವರ್‌ಬ್ರಿಜ್ ಬಳಿಯಿಂದ ಕಾಪಿಕಾಡ್ ತನಕ ರಾಷ್ಟ್ರೀಯ ಹೆದ್ದಾರಿ ಬದಿ ವಾಹನಗಳನ್ನು ನಿಲುಗಡೆ ಮಾಡ ಲಾಗುತ್ತಿದ್ದು, ಇದರಿಂದ ಹೆದ್ದಾರಿಯಲ್ಲಿ ಸಂಚರಿಸುವ ಇತರ ವಾಹನಗಳಿಗೆ ಸಮಸ್ಯೆಯಾಗುತ್ತಿದೆ ಎಂದು ವ್ಯಕ್ತಿ ಯೊಬ್ಬರು ದೂರು ಸಲ್ಲಿಸಿದರು. ಈ ಕುರಿತು ತಪಾಸಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಸಿಆರ್‌ಬಿ ಎಸಿಪಿ ವೆಲೆಂಟೈನ್ ಡಿಸೋಜ ತಿಳಿಸಿದರು. ಕೊಡಿಯಾಲ್‌ಗುತ್ತು ರಸ್ತೆಯಲ್ಲಿ ಹಂಪ್ ನಿರ್ಮಾಣ ಹಾಗೂ ಅದಕ್ಕೆ ಬಣ್ಣ ಬಳಿಯಬೇಕೆಂಬ ಒತ್ತಾಯ ಕೇಳಿ ಬಂತು. ಹಂಪ್‌ಗಳಿಗೆ ಬಣ್ಣ ಬಳಿಯುವ ಕೆಲಸವನ್ನು ಪಾಲಿಕೆ ಕೈಗೆತ್ತಿಕೊಂಡಿದ್ದು, ಶೀಘ್ರದಲ್ಲಿಯೇ ಅದು ಪೂರ್ತಿ ಗೊಳ್ಳಲಿದೆ ಎಂದು ಎಸಿಪಿ ತಿಲಕ್ ಚಂದ್ರ ತಿಳಿಸಿದರು.

ಹೈ ಬೀಮ್ ಲೈಟ್ ಬಗ್ಗೆ ಜನರು ದೂರು ನೀಡಿದರು. ಇದಕ್ಕೆ ಉತ್ತರಿಸಿದ ಎಸಿಪಿ ತಿಲಕ್‌ಚಂದ್ರ ಈ ಕುರಿತು ಕ್ರಮ ಜರಗಿಸಲಾಗುತ್ತಿದ್ದು, ಗುರುವಾರ 100 ವಾಹನ ಚಾಲಕರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಕಾರ್ಯಾಚರಣೆ ಮುಂದುವರಿಯ ಲಿದೆ ಎಂದರು. ಕೊಣಾಜೆ ಸಮೀಪದ ಕೋಡಿಜಾಲ್ ಪರಿಸರದಲ್ಲಿ ಕೆಲವು ತಿಂಗಳ ಹಿಂದೆ ನಡೆದ ಕಳವು ಪ್ರಕರಣಗಳು ಪತ್ತೆಯಾಗಿಲ್ಲ. ಪೊಲೀಸರು ಜನ ಸಂಪರ್ಕ ಸಭೆಯನ್ನು ಏರ್ಪಡಿಸಬೇಕು ಎಂದೊಬ್ಬರು ಸಲಹೆ ಮಾಡಿದರು.

ಹಳೆ ಬಂದರು ದಕ್ಕೆಯಿಂದ ಹಂಪನಕಟ್ಟೆ ಕಡೆಗೆ ಪ್ರಯಾಣಿಕರನ್ನು ಒಯ್ಯಲು ಕೆಲವು ರಿಕ್ಷಾ ಚಾಲಕರು ನಿರಾಕರಿಸುತ್ತಿದ್ದಾರೆ. ಇದರಿಂದ ಮುಖ್ಯವಾಗಿ ಮಹಿಳೆಯರಿಗೆ ಸಮಸ್ಯೆಯಾಗುತ್ತಿದೆ ಎಂಬ ದೂರಿಗೆ ಉತ್ತರಿ ಸಿದ ಎಸಿಪಿ ತಿಲಕ್‌ಚಂದ್ರ ಸಾರ್ವಜನಿಕರು ಹಾಗೆ ನಿರಾಕರಿಸುವ ರಿಕ್ಷಾಗಳ ೆಟೋ ತೆಗೆದು ‘ಕುಡ್ಲ ಟ್ರಾಫಿಕ್’ ವಾಟ್ಸ್‌ಆ್ಯಪ್ ಗ್ರೂಪ್‌ಗೆ (9480802312) ಕಳುಹಿಸಬಹುದು ಎಂದು ಅವರು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News