ಇರಾಕ್‌ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ: 35 ಬಲಿ

Update: 2017-05-20 16:37 GMT

ಬಗ್ದಾದ್, ಮೇ 20: ಬಗ್ದಾದ್ ಮತ್ತು ದಕ್ಷಿಣ ಇರಾಕ್‌ನ ಚೆಕ್‌ಪೋಸ್ಟ್‌ನಲ್ಲಿ ಐಸಿಸ್ ಉಗ್ರರು ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಟ 35 ಮಂದಿ ಬಲಿಯಾಗಿದ್ದು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಐಸಿಸ್ ಉಗ್ರರ ಹಿಡಿತದಲ್ಲಿರುವ ಮೊಸೂಲ್ ಪಟ್ಟಣವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಇರಾಕ್ ಪಡೆಗಳು ಕಳೆದ ಏಳು ತಿಂಗಳಿನಿಂದ ಪ್ರಯತ್ನ ಮುಂದುವರಿಸಿರುವಂತೆಯೇ ಈ ದಾಳಿ ನಡೆದಿದೆ. ಬಾಗ್ದಾದ್ ನಗರದ ದಕ್ಷಿಣದಲ್ಲಿರುವ ಅಬು ದಶೀರ್ ಪ್ರದೇಶದಲ್ಲಿರುವ ಚೆಕ್‌ಪೋಸ್ಟ್‌ನಲ್ಲಿ ಆತ್ಮಹತ್ಯಾ ಕಾರ್ ಬಾಂಬ್ ದಾಳಿ ನಡೆದಿದೆ. ಇದರಲ್ಲಿ 24 ಮಂದಿ ಬಲಿಯಾಗಿದ್ದು 20 ಮಂದಿ ಗಾಯಗೊಂಡರು. ಭದ್ರತಾ ಪಡೆಗಳು ಓರ್ವ ದಾಳಿಕೋರನನ್ನು ಗುಂಡಿಕ್ಕಿ ಕೊಂದರು. ಆದರೆ ಇನ್ನೋರ್ವ ತನ್ನನ್ನು ಸ್ಪೋಟಿಸಿಕೊಳ್ಳಲು ಯಶಸ್ವಿಯಾದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News