ರಿಯೋ ಗೇಮ್ಸ್: 100ಕ್ಕೂ ಅಧಿಕ ಪದಕಗಳು ದೋಷಪೂರಿತ

Update: 2017-05-20 17:16 GMT

ಸಾವೊಪೌಲೊ, ಮೇ 20: ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಾಳುಗಳು ಗೆದ್ದುಕೊಂಡಿರುವ 100ಕ್ಕೂ ಅಧಿಕ ಪದಕಗಳಿಗೆ ತುಕ್ಕು ಹಿಡಿದಿದ್ದು ಕಪ್ಪು ಕಲೆಗಳು ಬಿದ್ದಿವೆ. ಈ ಹಿನ್ನೆಲೆಯಲ್ಲಿ ದೋಷಪೂರಿತ ಪದಕಗಳನ್ನು ಗೇಮ್ಸ್ ಆಯೋಜಕರಿಗೆ ವಾಪಸು ನೀಡಲಾಗಿದೆ.

 "ಮುಖ್ಯವಾಗಿ ಕಂಚಿನ ಪದಕಗಳು ಸೇರಿದಂತೆ ಕನಿಷ್ಠ 130 ಪದಕಗಳು ದೋಷಪೂರಿತವಾಗಿದ್ದು, ಪ್ಯಾರಾಲಿಂಪಿಕ್ಸ್‌ನಲ್ಲಿ ಗೆದ್ದಂತಹ ಪದಕಗಳು ಇದರಲ್ಲಿವೆ. ಕಳೆದ ವರ್ಷ ಬ್ರೆಝಿಲ್‌ನಲ್ಲಿ ಪದಕಗಳನ್ನು ತಯಾರಿಸಲಾಗಿತ್ತು'' ಎಂದು ಗೇಮ್ಸ್ ವಕ್ತಾರರಾದ ಮರಿಯೊ ಅಂಡ್ರಾಡ ಹೇಳಿದ್ದಾರೆ.

ಒಲಿಂಪಿಕ್ಸ್‌ನಲ್ಲಿ 2,488 ಪದಕಗಳನ್ನು ತಯಾರಿಸಲಾಗಿತ್ತು. ಪ್ಯಾರಾಲಿಂಪಿಕ್ಸ್‌ಗೆ ನೂರಕ್ಕೂ ಅಧಿಕ ಪದಕಗಳನ್ನು ನೀಡಲಾಗಿತ್ತು. ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಶೇ.30ರಷ್ಟು ಬಳಕೆಯಾದ ವಸ್ತುಗಳಿಂದ ತಯಾರಿಸಲಾಗಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News