ಒಂದೇ ವಾರದಲ್ಲಿ ಎವರೆಸ್ಟ್‌ನ್ನು ಎರಡು ಬಾರಿ ಹತ್ತಿ ದಾಖಲೆ ಸೃಷ್ಟಿಸಿದ ಭಾರತೀಯ ಮಹಿಳೆ

Update: 2017-05-21 10:40 GMT
ತಂಡದ ಸದಸ್ಯನೊಂದಿಗೆ ಅಂಷು ಜಮ್ಸೆಂಪಾ

ಕಠ್ಮಂಡು,ಮೇ 21: ಭಾರತದ ಅರುಣಾಚಲ ಪ್ರದೇಶದ ನಿವಾಸಿ, ಎರಡು ಮಕ್ಕಳ ತಾಯಿ ಅಂಷು ಜಮ್ಸೆಂಪಾ(37) ಅವರು ರವಿವಾರ ಬೆಳಿಗ್ಗೆ ವಿಶ್ವದ ಅತ್ಯಂತ ಎತ್ತರದ ಪರ್ವತ ಶಿಖರ ಎವರೆಸ್ಟ್‌ನ ತುದಿಯನ್ನು ತಲುಪಿದ್ದಾರೆ. ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಎರಡನೇ ಬಾರಿ ಅವರು ಈ ಸಾಧನೆಯನ್ನು ಮಾಡಿದ್ದಾರೆ. ತನ್ಮೂಲಕ ಒಂದೇ ಋತುವಿನಲ್ಲಿ ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಎರಡು ಬಾರಿ ಎವರೆಸ್ಟ್ ಮೇಲೆ ವಿಜಯ ಸಾಧಿಸಿರುವ ವಿಶ್ವದ ಮೊದಲ ಮಹಿಳೆ ಎಂಬ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಅಂಷು ಕಳೆದ ಮಂಗಳವಾರವಷ್ಟೇ 29,028 ಅಡಿ ಎತ್ತರದ ಶಿಖರದಿಂದ ಮರಳಿದ್ದರು. ಕೆಲ ಸಮಯದ ವಿಶ್ರಾಂತಿಯ ಬಳಿಕ ಇನ್ನೊಮ್ಮೆ ಆರೋಹಣವನ್ನು ಆರಂಭಿಸಿದ್ದರು. ಸ್ಥಳೀಯ ಕಾಲಮಾನ ಇಂದು ಬೆಳಿಗ್ಗೆ ಎಂಟು ಗಂಟೆ ಶಿಖರದ ತುದಿಯನ್ನು ತಲುಪುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ ಎಂದು ಡ್ರೀಮ್ ಹಿಮಾಲಯ ಅಡ್ವೆಂಚರ್ಸ್‌ನ ದಾವಾ ಲಾಮಾ ತಿಳಿಸಿದರು.

ಆರೋಹಣಕ್ಕೆ ಮುನ್ನ ಅಂಷು ಟಿಬೆಟಿಯನ್ನರ ಆಧ್ಯಾತ್ಮಿಕ ಗುರು ದಲಾಯಿ ಲಾಮಾರ ಆಶೀರ್ವಾದವನ್ನು ಪಡೆದುಕೊಂಡಿದ್ದರು.

ಈ ವರೆಗಿನ ಒಂದೇ ಋತುವಿನಲ್ಲಿ ಎರಡು ಬಾರಿ ಎವರೆಸ್ಟ್ ಶಿಖರವನ್ನು ಹತ್ತಿದ್ದ ಮಹಿಳೆಯರ ದಾಖಲೆ ನೇಪಾಳಿ ಪರ್ವತಾರೋಹಿ ಛುರಿಂ ಶೆರ್ಪಾ ಅವರ ಹೆಸರಿನಲ್ಲಿದೆ. ಅವರು 2012ರಲ್ಲಿ ಈ ಸಾಧನೆಯನ್ನು ಮಾಡಿದ್ದರು.

ಅಂಷು ಒಟ್ಟು ಐದು ಬಾರಿ ಎವರೆಸ್ಟ್ ಆರೋಹಣ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News