ಧೋನಿಯ ದರ್ಶನಕ್ಕೆ ಅವರ ಮನೆ ಮುಂದೆ ನಿಂತಿದ್ದವನು ಈಗ ಅವರ ಸಹ ಆಟಗಾರ!

Update: 2017-05-21 11:31 GMT

  ಹೊಸದಿಲ್ಲಿ, ಮೇ 21: ಓರ್ವ ಅಭಿಮಾನಿಯಾಗಿ ಭಾರತದ ಮಾಜಿ ನಾಯಕ ಎಂಎಸ್ ಧೋನಿಯನ್ನು ನೋಡಬೇಕೆಂಬ ಬಯಕೆಯಲ್ಲಿ ಅವರ ಮನೆ ಮುಂದೆ ಗಂಟೆಗಟ್ಟಲೆ ಕಾದು ನಿಂತಿದ್ದವನು ಈಗ ಧೋನಿ ಆಡುವ ಐಪಿಎಲ್ ತಂಡದಲ್ಲೇ ಆಡುವ ಅವಕಾಶ ಪಡೆದಿದ್ದಾರೆ. ಈ ಅದೃಷ್ಟವಂತ ಬೇರ್ಯಾರೂ ಅಲ್ಲ, ಧೋನಿಯ ಊರಿನ ರಾಹುಲ್ ತ್ರಿಪಾಠಿ.

 ಧೋನಿಯ ತವರುಪಟ್ಟಣ ರಾಂಚಿಯಲ್ಲಿ ಜನಿಸಿರುವ ತ್ರಿಪಾಠಿ ಪ್ರಸ್ತುತ ದೇಶೀಯ ಕ್ರಿಕೆಟ್‌ನಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದಾರೆ. 10ನೆ ಆವೃತ್ತಿಯಲ್ಲಿ ಐಪಿಎಲ್‌ನಲ್ಲಿ ಪುಣೆ ಸೂಪರ್ ಜೈಂಟ್ ಪರ ಆಡುವ ಅವಕಾಶ ಪಡೆದಿದ್ದ ತ್ರಿಪಾಠಿ ಉತ್ತಮ ಪ್ರದರ್ಶನದ ಮೂಲಕ ಪುಣೆ ತಂಡ ಮೊದಲ ಬಾರಿ ಫೈನಲ್‌ಗೆ ತಲುಪಲು ದೊಡ್ಡ ಕಾಣಿಕೆ ನೀಡಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 93 ರನ್ ಗಳಿಸಿದ್ದ ತ್ರಿಪಾಠಿ ಎಲ್ಲರ ಗಮನ ಸೆಳೆದಿದ್ದರು. 52 ಎಸೆತಗಳಲ್ಲಿ 93 ರನ್ ಗಳಿಸಿದ್ದ ತ್ರಿಪಾಠಿ ಕೆಕೆಆರ್ ಸ್ಪಿನ್ನರ್ ಕುಲ್‌ದೀಪ್ ಯಾದವ್ ಬೌಲಿಂಗ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ದರು. ಶತಕ ವಂಚಿತರಾಗಿದ್ದ ತ್ರಿಪಾಠಿ ಇನಿಂಗ್ಸ್‌ನಲ್ಲಿ 7 ಸಿಕ್ಸರ್ ಹಾಗೂ 9 ಬೌಂಡರಿಗಳಿದ್ದವು.

  ಆರ್‌ಪಿಎಸ್ ಪರ ಧೋನಿಯೊಂದಿಗೆ ಮೊದಲ ಬಾರಿ ನೆಟ್ ಪ್ರಾಕ್ಟೀಸ್ ನಡೆಸಿದ ಸಂದರ್ಭವನ್ನು ನೆನಪಿಸಿಕೊಂಡ ತ್ರಿಪಾಠಿ,‘‘ ನಾವಿಬ್ಬರೂ ತಲಾ ಎರಡು ಸುತ್ತಿನ ಅಭ್ಯಾಸ ನಡೆಸುವ ಎಂದು ಧೋನಿ ನನ್ನ ಬಳಿ ಹೇಳಿದ್ದರು. ನಾನು ಐದಾರು ಎಸೆತಗಳನ್ನು ಸರಿಯಾಗಿ ಎದುರಿಸಲು ಸಾಧ್ಯವಾಗಲಿಲ್ಲ. ಧೋನಿ ನನ್ನ ಎದುರು ನಿಂತು ನನ್ನ ಬ್ಯಾಟಿಂಗ್‌ನ್ನು ನೋಡುತ್ತಿದ್ದರು. ಅವರು ತನ್ನ ಸರದಿಗಾಗಿ ಕಾಯುತ್ತಿದ್ದರು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News