ಮಾವು -ಹಲಸು ಮೇಳಕ್ಕೆ ಹರಿದು ಬಂದ ಜನ ಸಾಗರ

Update: 2017-05-21 17:40 GMT

ಮಂಗಳೂರು ಮೇ 21: ಕದ್ರಿಯಲ್ಲಿ ನಡೆಯುತ್ತಿರುವ ಮಾವು-ಹಲಸು ಮೇಳಕ್ಕೆ ಮೂರನೆ ದಿನವಾದ ಇಂದು ರಜಾದಿನವಾದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಮಾವು-ಹಲಸು ಹಾಗೂ ಅವುಗಳಿಂದ ತಯಾರಿಸಿದ ಜ್ಯೂಸ್, ಹಪ್ಪಳಕ್ಕೆ ಬೇಡಿಕೆ ಕಂಡು ಬಂತು.

ಕೋಲಾರದ ಮಾವು ಬೆಳೆಗಾರರು ತಮ್ಮ ಮಾವಿಗೆ ಗ್ರಾಹಕರಿಂದ ಉತ್ತಮ ಬೇಡಿಕೆ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ತೂಬು ಗೆರೆಯ ರೈತರು ತಮ್ಮ ಊರಿನ ವಿಶೇಷ ಹಲಸಿನ ಬಗ್ಗೆ ರೈತರಿಗೆ ಮಾಹಿತಿ ನೀಡುತ್ತಾ ಉತ್ಸಾಹದಿಂದ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ.

‘‘ಕಳೆದ ಮೂರು ವರ್ಷಗಳಲ್ಲಿ ಊರಲ್ಲಿ ಮಳೆ ಬಂದಿಲ್ಲಾ. ನೀರು 1000 ಅಡಿಗಿಂತಲೂ ಕೆಳಗೆ ಹೋಗಿದೆ. ಆ ಕಾರಣದಿಂದ ಹಲಸಿನ ಇಳುವರಿ ಕಡಿಮೆ. ಹಲಸಿಗೆ ನೀರು ಹೆಚ್ಚು ಬೇಡ ಆದರೆ ಮಳೆ ಬಂದರೆ ಉತ್ತಮವಾದ ದೊಡ್ಡ ಗಾತ್ರದಲ್ಲಿ ಹೆಚ್ಚು ಇಳುವರಿ ದೊರೆಯುತ್ತದೆ’’ ಎಂದು ತೂಬು ಗೆರೆಯ ಹಲಸು ಬೆಳೆಗಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಇಂದು ಮಾವು ಹಲಸಿನ ಗಿಡಗಳು ಮಾರಾಟಕ್ಕೆ ಇದ್ದ ಕಾರಣ ಕೆಲವು ಗ್ರಾಹಕರು ಉತ್ಸಾಹದಿಂದ ಖರೀದಿಸುತ್ತಿದ್ದುದು ಕಂಡು ಬಂತು. ಮೇಳದಲ್ಲಿ ಚಂದ್ರ ಹಲಸು, ಸ್ವರ್ಣ ಹಲಸು, ತೂಬುಗೆರೆ ಹಲಸು, ರುದ್ರಾಕ್ಷಿ ಹಲಸು, ಸಕ್ಕರೆ ಪಟ್ನ, ಭೈರಸಂದ್ರ ಹಲಸುಗಳ ತಳಿಗಳು ಬಾದಾಮಿ, ಮಲ್ಲಿಕಾ, ಆಪೂಸು, ರಸಪೂರಿ, ನೀಲಂ, ಮಲ್ ಗೋವಾ, ನೀಲಂ, ಬಂಗನ್ ಪಳ್ಳಿ, ಸಕ್ಕರೆ ಗುತ್ತಿ, ಪಯಿರಿ, ಕಲಾಪ್ಪಾಡಿ ಮೊದಲಾದ ತಳಿಗಳ ಹಣ್ಣುಗಳನ್ನು ಹಾಗೂ ಮಾವಿನ ಪದಾರ್ಥಗಳಿಗೆ ಬಳಕೆಯಾಗುವ ಸಕ್ಕರೆ ಗುತ್ತಿ ಹಾಗೂ ಇತರ ಸ್ಥಳೀಯ ತಳಿಗಳ ಮಾವನ್ನು ಗ್ರಾಹಕರು ಖರೀದಿಸುತ್ತಿರುವುದು ಕಂಡು ಬಂತು.ಶನಿವಾರದ ವರೆಗೆ ಮಾವು ಮೇಳ ನಡೆಯಲಿದೆ.

ದೇಶದ ಮಾವಿಗೆ ವಿದೇಶದಲ್ಲೂ ಬೇಡಿಕೆ:

ಕಳೆದ ವರ್ಷ 7,000 ಮೆಟ್ರಿಕ್ ಟನ್ ಮಾವನ್ನು ವಿದೇಶಕ್ಕೆ ರಫ್ತು ಮಾಡಲಾಗಿತ್ತು. ಈ ಬಾರಿ 10 ಸಾವಿರ ಮೆಟ್ರಿಕ್ ಟನ್ ರಫ್ತು ಮಾಡುವ ಗುರಿ ಇದೆ .ದೇಶದ ಮಾವಿಗೆ ಆಸ್ಟ್ರೇಲಿಯಾ, ಅಮೇರಿಕಾದಿಂದ ಬೇಡಿಕೆ ಹೆಚ್ಚಳವಾಗುತ್ತಿದೆ. ಈ ಬಾರಿ ಆಸ್ಟ್ರೇಲಿಯಾ 200 ಟನ್ ಮಾವುಗೆ ಬೇಡಿಕೆ ಸಲ್ಲಿಸಿದೆ. ಅಮೇರಿಕಕ್ಕೆ 100 ಟನ್ ಮಾವು ಈಗಾಗಲೇ ರಫ್ತಾಗುತ್ತಿದೆ ಎಂದು ಮಾವು ಮೇಳಕ್ಕೆ ಆಗಮಿಸಿರುವ ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಕದಿರೇ ಗೌಡ ತಿಳಿಸಿದ್ದಾರೆ.

ಭಾರತದ ಮಾವು ಅಮೇರಿಕಾ, ಯುರೋಫ್, ಜರ್ಮನ್, ಗಲ್ಫ್ ರಾಷ್ಟ್ರಗಳಿಗೆ, ಸಿಂಗಾಪುರಕ್ಕೆ ರಫ್ತಾಗುತ್ತಿದೆ ಎಂದು ಎಂದು ಕದಿರೇ ಗೌಡ ತಿಳಿಸಿದರು.

ದೇಶದ ಮಾವು ಹೆಚ್ಚಿನ ಪ್ರಮಾಣದಲ್ಲಿ ಪಶ್ಚಿಮ ಏಷ್ಯಾ ಖಂಡದಲ್ಲಿ ಹಾಗೂ ಯೂರೋಪ್ ನಲ್ಲಿ ಬೇಡಿಕೆ ಪಡೆದಿತ್ತು. ದೇಶಿಯಾ ಮಾವಿಗೆ ಬೇಡಿಕೆ ಇದೆ ಇತ್ತೀಚಿನ ದಿನಗಳಲ್ಲಿ ಗಲ್ಫ್ ದೇಶಗಳಲ್ಲೂ ಭಾರತದ ಮಾವಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಕದಿರೇ ಗೌಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News