ಆಸ್ಟ್ರೇಲಿಯಾದಲ್ಲಿ ಮುಂದುವರಿದ ಜನಾಂಗೀಯ ದೌರ್ಜನ್ಯ: ಭಾರತೀಯ ಮೂಲದ ವ್ಯಕ್ತಿಗೆ ದಂಪತಿಯಿಂದ ಹಲ್ಲೆ

Update: 2017-05-22 11:55 GMT

ಹೊಸದಿಲ್ಲಿ, ಮೇ 22: ಆಸ್ಟ್ರೇಲಿಯಾದಲ್ಲಿ ಮತ್ತೊಮ್ಮೆ ಜನಾಂಗೀಯ ದೌರ್ಜನ್ಯದ ಘಟನೆ ನಡೆದಿದ್ದು, ಭಾರತೀಯ ಮೂಲದ ಕ್ಯಾಬ್ ಚಾಲಕರೋರ್ವರಿಗೆ ದಂಪತಿಯೊಂದು ಮಾರಣಾಂತಿಕ ಹಲ್ಲೆ ನಡೆಸಿರುವುದು ವರದಿಯಾಗಿದೆ.

ಭಾರತೀಯ ಮೂಲದ ವ್ತಕ್ತಿಯ ಕಾರಿಗೆ ಏರಿದ ಆಸ್ಟ್ರೇಲಿಯಾದ ದಂಪತಿ ಚಾಲಕನೊಂದಿಗೆ ಜಗಳವಾಡಿ ಹಲ್ಲೆ ನಡೆಸಿದೆ. ಕಾರು ಚಲಿಸುತ್ತಿದ್ದಂತೆ ಕಾರಿನಲ್ಲಿದ್ದ ಮಹಿಳೆ ಬಾಗಿಲು ತೆರೆಯುತ್ತಿದ್ದ ಬಗ್ಗೆ ಚಾಲಕ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಕೋಪಗೊಂಡ ದಂಪತಿ ಚಾಲಕನಿಗೆ ಹೊಡೆದು ತುಳಿದುದ್ದಲ್ಲದೆ, ಜನಾಂಗೀಯ ನಿಂದನೆ ನಡೆಸಿದ್ದಾರೆ.

ಗಾಯಾಳು ಭಾರತೀಯನನ್ನು ರಾಯಲ್ ಹೋಬರ್ಟ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಟ್ರೇಲಿಯಾದ ವಾರ್ತಾ ವೆಬ್ ಸೈಟೊಂದು ಪ್ರಕಟಿಸಿದೆ.

“ಇದು ತೀರಾ ಅಪಾಯಕಾರಿಯಾದುದರಿಂದ ತಾನು ಕೆಲಸ ಮುಂದುವರಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದೌರ್ಜನ್ಯಕ್ಕೊಳಗಾದ ವ್ಯಕ್ತಿ ಆಗ್ರಹಿಸಿದ್ದಾರೆ.

ಪ್ರಯಾಣಿಕರಲ್ಲೋರ್ವರು ಅನಾರೋಗ್ಯಕ್ಕೀಡಾದಾಗ ಚಾಲಕ ಟ್ಯಾಕ್ಸಿಯಿಂದ ಇಳಿಯುವಂತೆ ಹೇಳಿದ್ದಾರೆ. ಮಾತಿಕ ಚಕಮಕಿ ನಡೆಯುತ್ತಿದ್ದಾಗ ಜನಾಂಗೀಯ ನಿಂದನೆ ನಡೆಸಲಾಗಿದೆ ಎನ್ನುವ ಆರೋಪಗಳಿದ್ದರೂ ಘಟನೆಯನ್ನು ಜನಾಂಗೀಯ ನಿಂದನೆ ಪ್ರೇರಿತ ಎಂದು ಹೇಳಲಾಗದು ಎಂದು ಅಧಿಕಾರಿಯೋರ್ವರು ಪ್ರತಿಕ್ರಿಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News