ಮೌಂಟ್ ಎವರೆಸ್ಟ್‌ನ ಭಾಗ ಕುಸಿತ

Update: 2017-05-22 15:15 GMT

 ಕಠ್ಮಂಡು, ಮೇ 22: ಮೌಂಟ್ ಎವರೆಸ್ಟ್ ಶಿಖರದ ಸಮೀಪದ ಪ್ರಸಿದ್ಧ ಬಂಡೆ ಆವೃತ ಸ್ಥಳವೊಂದು ಕುಸಿದಿರುವುದನ್ನು ಪರ್ವತಾರೋಹಿಗಳು ಖಚಿತಪಡಿಸಿದ್ದಾರೆ. ಇದು ಪರ್ವತಾರೋಹಣವನ್ನು ಮತ್ತಷ್ಟು ಅಪಾಯಕಾರಿಯಾಗಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

‘ಹಿಲರಿ ಸ್ಟೆಪ್’ ಎಂಬ ಹೆಸರಿನ ಈ ಸ್ಥಳ 2015ರ ನೇಪಾಳ ಭೂಕಂಪದಿಂದಾಗಿ ನಾಶಗೊಂಡಿರಬಹುದು ಎಂದು ಭಾವಿಸಲಾಗಿದೆ.

 ಮೌಂಟ್ ಎವರೆಸ್ಟನ್ನು ಮೊದಲ ಬಾರಿಗೆ ಏರಿದ ಸರ್ ಎಡ್ಮಂಡ್ ಹಿಲರಿ ಸ್ಮರಣಾರ್ಥ ಈ ಸ್ಥಳಕ್ಕೆ ಈ ಹೆಸರು ಇಡಲಾಗಿದೆ.

ಸರ್ ಎಡ್ಮಂಡ್ ಹಿಲರಿ, ಶೆರ್ಪಾ ತೇನಸಿಂಗ್ ನಾರ್ಗೆ ಜೊತೆಗೆ 1953ರಲ್ಲಿ ಎವರೆಸ್ಟ್ ಶಿಖರವನ್ನೇರಿ ದಾಖಲೆ ನಿರ್ಮಿಸಿದ್ದಾರೆ.

ಹಿಮಾಲಯ ಪರ್ವತದ ಆಗ್ನೇಯದಲ್ಲಿರುವ 12 ಮೀಟರ್ ಎತ್ತರದ ಈ ಬಂಡೆ ಪ್ರದೇಶವನ್ನು ಬಹುತೇಕ ಲಂಬವಾಗಿ ಹತ್ತಬೇಕಾಗುತ್ತದೆ.

ಕಳೆದ ವಾರ ಎವರೆಸ್ಟ್ ಏರಿದ ಬ್ರಿಟಿಶ್ ಆರೋಹಿ ಟಿಮ್ ಮೋಸ್‌ಡೇಲ್ ಹಿಲರಿ ಸ್ಟೆಪ್‌ನ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ. ಅದು ಕುಸಿದಿರುವುದು ಚಿತ್ರದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News