ಬ್ಯಾಂಕಾಕ್ ಆಸ್ಪತ್ರೆಯಲ್ಲಿ ಸ್ಫೋಟ: 24 ಜನರಿಗೆ ಗಾಯ

Update: 2017-05-22 15:17 GMT

ಬ್ಯಾಂಕಾಕ್, ಮೇ 22: ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನ ಆಸ್ಪತ್ರೆಯೊಂದರಲ್ಲಿ ಸೋಮವಾರ ಸಂಭವಿಸಿ ಬಾಂಬ್ ಸ್ಫೋಟದಲ್ಲಿ 24 ಮಂದಿ ಗಾಯಗೊಂಡಿದ್ದಾರೆ.

2014ರ ಸೇನಾ ಕ್ರಾಂತಿಯ ಮೂರನೆ ವಾರ್ಷಿಕ ದಿನದಂದು ಈ ಸ್ಫೋಟ ನಡೆದಿದೆ.

ಫ್ರಮೊನ್‌ಕುಟ್ಕಲಾವೊ ಆಸ್ಪತ್ರೆಯಲ್ಲಿ ನಡೆದ ಸ್ಫೋಟದ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಈ ಆಸ್ಪತ್ರೆಗೆ ಹೆಚ್ಚಾಗಿ ನಿವೃತ್ತ ಸೇನಾಧಿಕಾರಿಗಳು ಭೇಟಿ ನೀಡುತ್ತಾರೆ.

‘‘ಅದೊಂದು ಬಾಂಬ್ ಸ್ಫೋಟವಾಗಿತ್ತು. ಬಾಂಬ್ ತಯಾರಿಸಲು ಬಳಸಲಾಗುವ ವಸ್ತುಗಳನ್ನು ನಾವು ಕಂಡಿದ್ದೇವೆ’’ ಎಂದು ಪೊಲೀಸ್ ಸ್ಫೋಟಕ ವಿಭಾಗದ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News