ಬಾಲಕಿಯನ್ನು ಕಚ್ಚಿ ನೀರಿಗೆಳೆದ ಜಲಚರ!

Update: 2017-05-22 16:57 GMT

ಕೆನಡ, ಮೇ 22: ಕೆನಡಾ ಪಶ್ಚಿಮ ಕರಾವಳಿಯ ಸಮುದ್ರತೀರದ ಸ್ಟೀವನ್ಸ್‌ಟೋನ್‌ನಲ್ಲಿ  ಬಾಲಕಿಯ ಮೇಲೆ ಕಡಲಸಿಂಹವೊಂದು ದಾಳಿ ಮಾಡಿದ್ದು, ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಈಗ ವೈರಲ್ ಅಗುತ್ತಿದೆ. ಬಾಲಕಿಯನ್ನು ನೀರಿಗೆ ಕಚ್ಚಿ ಎಳೆದುಕೊಂಡು ಹೋಗುತ್ತಿರುವುದು ವೀಡಿಯೊದಲ್ಲಿ ಕಾಣಿಸುತ್ತಿದೆ.

ಕೂಡಲೇ ಓರ್ವ ನೀರಿಗೆ ಹಾರಿ ಕಡಲಸಿಂಹದ ಬಾಯಿಯಿಂದ ಬಾಲಕಿಯನ್ನು ರಕ್ಷಿಸಿದ್ದಾರೆ. ಆಹಾರಕ್ಕಾಗಿ ಬೋಟ್ ಜೆಟ್ಟಿಯ ಬಳಿಗೆ ಬಂದ ಕಡಲಸಿಂಹವನ್ನು ಬಾಲಕಿ ನೋಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಮೊದಲು ನೀರಿನಿಂದ ಮೇಲೆ ಹಾರಿದ ಕಡಲಸಿಂಹವನ್ನು ನೋಡಿ ಬಾಲಕಿ ನಗುತ್ತಾಳೆ.

ಅದು ನೀರಿನೊಳಗೆ ಹೋದ ಮೇಲೆ ಬೋಟ್‌ಜೆಟ್ಟಿಯ ಬದಿಯಲ್ಲಿ ಬಾಲಕಿ ಕೂತುಕೊಳ್ಳುತ್ತಾಳೆ. ಇದೇ ಸಂದರ್ಭ ಕಡಲಸಿಂಹ ದಾಳಿ ಮಾಡಿ ಆಕೆಯ ಬಟ್ಟೆಯನ್ನು ಕಚ್ಚಿ ನೀರಿನೊಳಗೆ ಎಳೆದೊಯ್ಯಿತು. ಬಾಲಕಿಯ ಬೊಬ್ಬೆಕೇಳಿ ವ್ಯಕ್ತಿಯೊಬ್ಬರೂ ಕೂಡಲೇ ನೀರಿಗೆ ಹಾರಿ ಬಾಲಕಿಯನ್ನು ಮೇಲೆತ್ತಿ ತಂದಿದ್ದಾರೆ. ಇಬ್ಬರಿಗೂ ಗಾಯಗಳಾಗಿಲ್ಲ.

ವೀಡಿಯೊ ಕೆಳಗಿದೆ ನೋಡಿ-

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News