ಮಹಿಳೆ ನಾಪತ್ತೆ

Update: 2017-05-22 15:47 GMT

ಮಂಗಳೂರು, ಮೇ 22: ತಾಲೂಕಿನ ಭ್ರಾಮರಿ ನಿಲಯ ಪಕ್ಷಿಕೆರೆ ಮೀನು ಮಾರ್ಕೆಟ್ ಬಳಿಯಿಂದ ಮಳೆಯೊಬ್ಬರು ನಾಪತ್ತೆಯಾಗಿ ರುವ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಮ್ರಾಲ್ ಗ್ರಾಮದ ಮಮತಾ (24) ಎಂಬವರು ನಾಪತ್ತೆಯಾದ ಮಹಿಳೆ. ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಕುಡಿಯುವ ನೀರಿನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಮೇ 14 ರಂದು ಸಂಜೆ 4:30ಕ್ಕೆ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ಬಳಿಕ ಪುತ್ತೂರಿನಲ್ಲಿ ಭೂತಕೋಲವನ್ನು ನೋಡಲು ಹೋಗಲಿದೆ ಮಂಗಳವಾರ ವಾಪಾಸ್ ಬರುವುದಾಗಿ ಹೇಳಿ ಹೋದವರು ಮನೆಗೆ ಬಾರದೆ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಹಿಳೆ 5 ಅಡಿ ಎತ್ತ ಇದ್ದು, ಹಳದಿ ಮತ್ತು ಬಿಳಿ ಬಣ್ಣದ ಹೂಗಳಿರುವ ಚೂಡಿದಾರದ ಟಾಪ್ ಮತ್ತು ಹಳದಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಮೂಗಿನಲ್ಲಿ ಕಪ್ಪು ಮಚ್ಚೆ ಇದ್ದು, ಕನ್ನಡ ಹಾಗೂ ತುಳು ಭಾಷೆ ಬಲ್ಲವರಾಗಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮುಲ್ಕಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News