ಚಾಂಪಿಯನ್ಸ್ ಟ್ರೋಫಿ ತಂಡದಿಂದ ಅಕ್ಮಲ್‌ಗೆ ಗೇಟ್‌ಪಾಸ್

Update: 2017-05-22 18:04 GMT

ಬರ್ಮಿಂಗ್‌ಹ್ಯಾಮ್,ಮೇ 22: ಎರಡು ಬಾರಿ ಫಿಟ್‌ನೆಸ್ ಟೆಸ್ಟ್‌ನಲ್ಲಿ ಅನುತ್ತೀರ್ಣರಾದ ಪಾಕಿಸ್ತಾನದ ಬ್ಯಾಟ್ಸ್‌ಮನ್ ಉಮರ್ ಅಕ್ಮಲ್‌ಗೆ ಇಂಗ್ಲೆಂಡ್‌ನಿಂದ ಸ್ವದೇಶಕ್ಕೆ ವಾಪಸಾಗುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಸೂಚಿಸಿದೆ.

ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನದ ಆಯ್ಕೆಗಾರರು ಅಕ್ಮಲ್ ಬದಲಿಗೆ ಉಮರ್ ಅಮಿನ್ ಹಾಗೂ ಹ್ಯಾರಿಸ್ ಸೊಹೈಲ್ ಪೈಕಿ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.

‘‘ಚಾಂಪಿಯನ್ಸ್ ಟ್ರೋಫಿಗೆ ಮುಂಚಿತವಾಗಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಶಿಬಿರದಲ್ಲಿ ಅಕ್ಮಲ್ ಎರಡು ಬಾರಿ ಫಿಟ್‌ನೆಸ್ ಟೆಸ್ಟ್‌ನಲ್ಲಿ ವಿಫಲರಾಗಿದ್ದಾರೆ. ಅನ್‌ಫಿಟ್ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಬಾರದು ಎನ್ನುವುದು ನಮ್ಮ ನಿಯಮ. ಈ ಹಿನ್ನೆಲೆಯಲ್ಲಿ ಅಕ್ಮಲ್‌ರನ್ನು ಸ್ವದೇಶಕ್ಕೆ ಕರೆಸಿಕೊಂಡು ಬದಲಿ ಆಟಗಾರರನ್ನು ಇಂಗ್ಲೆಂಡ್‌ಗೆ ಕಳುಹಿಸಲಾಗುವುದು’’ ಎಂದು ಶಹರ್ಯಾರ್ ಖಾನ್ ಇಎಸ್‌ಪಿಎನ್‌ಗೆ ತಿಳಿಸಿದ್ದಾರೆ.

ಪ್ರತಿಭಾವಂತ ಆಟಗಾರ ಅಕ್ಮಲ್ ಇತ್ತೀಚೆಗೆ ಪಾಕಿಸ್ತಾನ ಕಪ್ ಪಂದ್ಯದ ವೇಳೆ ಜುನೈದ್ ಖಾನ್‌ರೊಂದಿಗೆ ಮಾತಿನ ಚಕಮಕಿ ನಡೆಸಿ ವಿವಾದಕ್ಕೆ ಸಿಲುಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News