ಪುಟ್ಟ ಮಕ್ಕಳಿಗೆ ಹಿಂಸೆ: ಹಗಲು ಪಾಲನಾ ಕೇಂದ್ರ ಮಾಲಕಿ ಪೊಲೀಸ್ ವಶ !

Update: 2017-05-23 10:29 GMT

ಕೊಚ್ಚಿ,ಮೇ 23: ನಗರದ ಹಗಲು ಪಾಲನಾ ಕೇಂದ್ರ ಕರೆತಂದು ಬಿಟ್ಟು ಹೋಗುವ ಪುಟ್ಟ ಮಕ್ಕಳಿಗೆ ಕ್ರೂರವಾಗಿ ಹೊಡೆಯಲಾಗುತ್ತಿದೆ ಎನ್ನುವ ದೂರಿನಡಿಯಲ್ಲಿ ನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.ಒಂದೂವರೆ ವರ್ಷದ ಮಗುವನ್ನು ಸಂಸ್ಥೆಯ ಮಾಲಕಿ ಮಿನಿ ಹೊಡೆಯುತ್ತಿರುವ ದೃಶ್ಯಗಳು ಚ್ಯಾನೆಲೊಂದರಲ್ಲಿ ಪ್ರಸಾರವಾದ ಬಳಿಕ ಘಟನೆ ಬಹಿರಂಗವಾಗಿದೆ. ಕೊಚ್ಚಿ ಪಾಲಾರಿವಟ್ಟಂ ಕಳಿವೀಡ್ ಹಗಲು ಪಾಲನಾ ಕೇಂದ್ರದಲ್ಲಿ ಘಟನೆ ನಡೆದಿದೆ. ಒಂದೂವರೆ ವರ್ಷದ ಮಗುವಿಗೆ ಹೊಡೆಯುವ ದೃಶ್ಯಗಳು ಬಹಿರಂಗವಾಗಿವೆ. ಆದರೆ ಇದು ಏಕಮಾತ್ರ ಘಟನೆಯಲ್ಲಿ .ಇಲ್ಲಿ ಇಪ್ಪತ್ತರಷ್ಟು ಮಕ್ಕಳಿಗೆ ಹಲವು ನೆಪಗಳನ್ನು ಹೇಳಿ ಹೊಡೆಯಲಾಗುತ್ತಿದೆ. ಸಂಸ್ಥೆಯ ಉದ್ಯೋಗಿಯೊಬ್ಬಳು ಮಕ್ಕಳಿಗೆ ಹಿಂಸೆ ನೀಡುವ ವಿಷಯವನ್ನು ಚ್ಯಾನೆಲ್‌ಗೆ ತಿಳಿಸಿದ್ದರು.

ಹೆತ್ತವರು ಈ ಹಗಲು ಪಾಲನಾ ಕೇಂದ್ರಕ್ಕೆ ತಿಂಗಳಿಗೆ 1,500 ರೂ. ನಿಂದ 3500 ರೂ. ವರೆಗೆ ಶುಲ್ಕ ಪಾವತಿಸಿ ಮಕ್ಕಳನ್ನು ಸೇರಿಸುತ್ತಾರೆ. ಮಕ್ಕಳ ದೇಹದಲ್ಲಿದ್ದ ಕಲೆ ನೋಡಿ ಮಕ್ಕಳಿಗೆ ಹೊಡೆಯಲಾಗುತ್ತಿದೆಯೇ ಎನ್ನುವ ಸಂದೇಹ ತಲೆ ದೋರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News