ಜೇಮ್ಸ್ ಬಾಂಡ್ ಸರ್ ರೋಜರ್ ಮೂರ್ ಇನ್ನಿಲ್ಲ

Update: 2017-05-23 15:08 GMT

ಲಂಡನ್, ಮೇ 23: ಮಾಜಿ ಜೇಮ್ಸ್ ಬಾಂಡ್ ನಟ ರೋಜರ್ ಮೂರ್ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಈ ವಿಷಯವನ್ನು ಅವರ ಕುಟುಂಬವು ಟ್ವಿಟರ್‌ನಲ್ಲಿ ಘೋಷಿಸಿದೆ.

ಅವರು ಸ್ವಿಝರ್‌ಲ್ಯಾಂಡ್‌ನಲ್ಲಿ ಕ್ಯಾನ್ಸರ್‌ನಿಂದಾಗಿ ಮೃತಪಟ್ಟಿದ್ದಾರೆ ಎಂದು ಕುಟುಂಬ ತಿಳಿಸಿದೆ.

1973ರಿಂದ 1985ರ ನಡುವಿನ ಅವಧಿಯಲ್ಲಿ ಏಳು ಚಿತ್ರಗಳಲ್ಲಿ ರೋಜರ್ ಮೂರ್ ಎಂಐ6 ಏಜಂಟ್ ಜೇಮ್ಸ್ ಬಾಂಡ್ ಪಾತ್ರವನ್ನು ನಿರ್ವಹಿಸಿದ್ದರು.

12 ವರ್ಷಗಳ ಜೇಮ್ಸ್ ಬಾಂಡ್ ಬದುಕು ಅವರನ್ನು ಮಿಲಿಯಾಧೀಶನಾಗಿಸಿತು ಹಾಗೂ ಅವರು ಜಗತ್ತಿನ ಕಣ್ಮಣಿಯಾದರು.

1927 ಅಕ್ಟೋಬರ್ 14ರಂದು ಜನಿಸಿದ ರೋಜರ್, ಹಾಲಿವುಡ್‌ನಲ್ಲಿ ಮಿಂಚುವ ಮೊದಲು 1950 ದಶಕದ ಆದಿ ಭಾಗದಲ್ಲಿ ರೂಪದರ್ಶಿಯಾಗಿ ಕೆಲಸ ಮಾಡಿದ್ದರು.

ಅವರ ಚಿತ್ರಗಳು

ಲಿವ್ ಆ್ಯಂಡ್ ಲೆಟ್ ಡೈ (1973), ದ ಮ್ಯಾನ್ ವಿದ್ ದ ಗೋಲ್ಡನ್ ಗನ್ (1974), ದ ಸ್ಪೈ ಹೂ ಲವ್ಟ್ ಮೀ (1977), ಮೂನ್‌ರೇಕರ್ (1979), ಫಾರ್ ಯುವರ್ ಅಯ್ಸ್ ಓನ್ಲಿ (1981), ಓಕ್ಟೋಪುಸಿ (1983) ಮತ್ತು ಅ ವ್ಯೆ ಟು ಅ ಕಿಲ್ (1985).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News