ಅಜ್ಮಾನ್: ಸಾರಿಗೆ ದಂಡ 50 ಶೇ. ಕಡಿತ

Update: 2017-05-23 15:09 GMT

ಅಜ್ಮಾನ್ (ಯುಎಇ), ಮೇ 23: ಸಾರಿಗೆ ಉಲ್ಲಂಘನೆ ಪ್ರಕರಣಗಳಲ್ಲಿ ವಿಧಿಸಲಾಗುವ ದಂಡವನ್ನು 50 ಶೇಕಡದಷ್ಟು ಕಡಿತಗೊಳಿಸುವ ಯೋಜನೆಯೊಂದನ್ನು ಯುಎಇಯ ಅಜ್ಮಾನ್ ವಲಯದ ಪೊಲೀಸರು ರೂಪಿಸಿದ್ದಾರೆ. ಇದು ಪವಿತ್ರ ರಮಝಾನ್ ಮಾಸ ಆರಂಭಗೊಳ್ಳುವ ಮೇ 27ರಂದು ಜಾರಿಗೆ ಬರಲಿದೆ.

ಸಂಚಾರ ಉಲ್ಲಂಘನೆ ಪ್ರಕರಣಗಳಿಗೆ ವಿಧಿಸಲಾಗುವ ದಂಡದಲ್ಲಿ 50 ಶೇಕಡ ರಿಯಾಯಿತಿ ನೀಡಲಾಗುತ್ತದೆ ಹಾಗೂ ಇದು ರಮಝಾನ್ ಮಾಸ ಮುಕ್ತಾಯಗೊಳ್ಳುವ ಜೂನ್ 24ರವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಅಜ್ಮಾನ್ ಪೊಲೀಸ್‌ನ ಮುಖ್ಯ ಕಮಾಂಡರ್ ಮೇಜರ್ ಜನರಲ್ ಶೇಖ್ ಸುಲ್ತಾನ್ ಬಿನ್ ಅಬ್ದುಲ್ಲಾ ಅಲ್ ನುಐಮಿ ತಿಳಿಸಿದರು.

ಈ ವರ್ಷದ ಮೇ 21ರ ಮೊದಲು ಅಜ್ಮಾನ್‌ನಲ್ಲಿ ನಡೆಸಲಾದ ಎಲ್ಲ ಉಲ್ಲಂಘನೆಗಳಿಗೆ ಈ ರಿಯಾಯಿತಿ ಅನ್ವಯಗೊಳ್ಳುತ್ತದೆ. ಆದರೆ, ಕೆಂಪು ದೀಪವನ್ನು ಉಲ್ಲಂಘಿಸಿದ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿದ ಪ್ರಕರಣಗಳಿಗೆ ಇದು ಅನ್ವಯವಾಗುವುದಿಲ್ಲ. ಅದೇ ವೇಳೆ, ಹೆಚ್ಚಿನ ವೇಗಕ್ಕಾಗಿ ಕಾರುಗಳಲ್ಲಿ ಹೆಚ್ಚುವರಿ ಸಲಕರಣೆಗಳನ್ನು ಅಳವಡಿಸಿ ನಿಯಮಗಳನ್ನು ಉಲ್ಲಂಘಿಸಿದವರನ್ನೂ ಇದರ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News