ಮನೆಗೆ ಹಿಂದಿರುಗಿದಾಗ 5 ವರ್ಷದ ಪುತ್ರನ ತುಂಟತನ ಕಂಡು ಬೆಚ್ಚಿಬಿದ್ದ ತಂದೆ!

Update: 2017-05-23 15:30 GMT

ಚೀನಾ, ಮೇ 23: ಬೆಲೆಬಾಳುವ ವಸ್ತುಗಳು ಕೈಗೆ ಸಿಗುವ ಹಾಗೆ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗಬಾರದು ಎನ್ನುವುದಕ್ಕೆ ಈ ಸುದ್ದಿ ಒಳ್ಳೆಯ ಉದಾಹರಣೆ. ಚೀನಾದ ಶಾಂಡೋಂಗ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಗಾವೋ ಎಂಬವರು ಕೆಲಸ ಮುಗಿಸಿ ಮನೆಗೆ ಹಿಂದಿರುಗಿದ್ದ ವೇಳೆ ಅವರ 5 ವರ್ಷದ ಪುತ್ರ ಆಘಾತಕಾರಿ ಸಾಹಸವೊಂದನ್ನು ನಡೆಸಿದ್ದ. ಮಗನ ತುಂಟಾಟಕ್ಕೆ ಅಳಬೇಕೋ ಅಥವಾ ಗದರಬೇಕೋ ಒಂದೂ ಗೊತ್ತಾಗದೇ ಗಾವ್ ಸುಮ್ಮನೆ ನಿಲ್ಲಬೇಕಾಯಿತು.

ಈ 5 ವರ್ಷದ ಪುಟಾಣಿ ತಂದೆ ಕೂಡಿಟ್ಟಿದ್ದ  4,70,000 ರೂ. ಮೌಲ್ಯದ ನೋಟುಗಳನ್ನು ಆಟವಾಡುತ್ತಾ ಹರಿದುಹಾಕಿದ್ದ!. ಕೈಗೆ ಸಿಗುವ ಜಾಗದಲ್ಲೇ ಹಣ ಇದ್ದುದರಿಂದ ಆಟವಾಡುತ್ತಾ ಈ ಪೋರ ಅರಿವಿಲ್ಲದೆ ನೋಟುಗಳನ್ನು ತುಂಡುತುಂಡುಗಳಾಗಿ ಹರಿದುಹಾಕಿದ್ದ.

ಇದರಿಂದ ಕಂಗಾಲಾದ ಗಾವ್ ಹರಿದಿದ್ದ ನೋಟುಗಳನ್ನು ಮತ್ತೆ ಜೋಡಿಸಲು ಪ್ರಯತ್ನಿಸಿದರಾದರೂ ಚೂರುಚೂರಾಗಿದ್ದ ಕೆಲ ನೋಟುಗಳನ್ನು ಮರುಜೋಡಿಸುವುದು ಅವರಿಗೆ ಸಾಧ್ಯವಾಗಿಲ್ಲ.

“ಈ ಕಾರಣಕ್ಕಾಗಿ ಮಗುವನ್ನು ನಾನು ದೂರುವುದಿಲ್ಲ. ಅವನಿನ್ನೂ ಚಿಕ್ಕವನು” ಎಂದು ಗಾವ್ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News