×
Ad

ಇಸ್ರೇಲ್, ಫೆಲೆಸ್ತೀನ್ ಶಾಂತಿಗೆ ಟ್ರಂಪ್ ಕರೆ

Update: 2017-05-23 21:48 IST

ಜೆರುಸಲೇಂ, ಮೇ 23: ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಶಾಂತಿ ಏರ್ಪಡಿಸುವ ಪ್ರಯತ್ನಗಳನ್ನು ನಡೆಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಭೂತ ಕಾಲದ ನೋವು ಮತ್ತು ಅಪನಂಬಿಕೆಗಳನ್ನು’ ಬಿಟ್ಟುಬಿಡಿ ಎಂದು ಉಭಯ ಪಕ್ಷಗಳಿಗೆ ಮಂಗಳವಾರ ಕರೆ ನೀಡಿದರು.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಫೆಲೆಸ್ತೀನ್ ಪ್ರಾಧಿಕಾರದ ಅಧ್ಯಕ್ಷ ಮಹ್ಮೂದ್ ಅಬ್ಬಾಸ್‌ರನ್ನು ಟ್ರಂಪ್ ಭೇಟಿಯಾದರು.

ಇಸ್ರೇಲ್ ಮ್ಯೂಸಿಯಂನಲ್ಲಿ ಮಾತನಾಡಿದ ಟ್ರಂಪ್, ಮುಂದಕ್ಕೆ ಸಾಗಲು ಎರಡೂ ಬಣಗಳು ಸಿದ್ಧವಾಗಿವೆ ಎಂದು ಘೋಷಿಸಿದರು.

‘‘ಫೆಲೆಸ್ತೀನಿಯನ್ನರು ಶಾಂತಿಗಾಗಿ ಸಿದ್ಧರಾಗಿದ್ದಾರೆ’’ ಎಂದು ಟ್ರಂಪ್ ಹೇಳಿದರು. ಬಳಿಕ ತನ್ನೊಂದಿಗೆ ಇದ್ದ ಇಸ್ರೇಲ್ ಪ್ರಧಾನಿಯತ್ತ ತಿರುಗಿ, ‘‘ಬೆಂಜಮಿನ್ ನೆತನ್ಯಾಹು ಶಾಂತಿ ಬಯಸುತ್ತಾರೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News