×
Ad

ಮಹಾನಗರಗಳಲ್ಲಿ ಸೋಲಾರ್ ರೂಫ್‌ಟಾಪ್ ಬಳಕೆ ನಿರಾಶಾದಾಯಕ:ಗ್ರೀನ್‌ಪೀಸ್

Update: 2017-05-23 22:15 IST

ಹೊಸದಿಲ್ಲಿ,ಮೇ 23: ಸರಕಾರವು ಸಾಕಷ್ಟು ಸಹಾಯಧನವನ್ನು ನೀಡುತ್ತಿದ್ದರೂ ದಿಲ್ಲಿ ಮತ್ತು ಮುಂಬೈ ಸೇರಿದಂತೆ ಮಹಾನಗರಗಳಲ್ಲಿ ಕಟ್ಟಡಗಳಿಗೆ ಸೋಲಾರ್ ರೂಫ್‌ಟಾಪ್ ಅಥವಾ ತಾರಸಿಗಳ ಮೇಲೆ ಸೌರ ಫಲಕಗಳ ಅಳವಡಿಕೆ ನಿರಾಶಾದಾಯಕವಾಗಿದೆ ಎಂದು ಗ್ರೀನ್ ಪೀಸ್ ಮಂಗಳವಾರ ತನ್ನ ವಿಶ್ಲೇಷಣಾ ವರದಿಯಲ್ಲಿ ತಿಳಿಸಿದೆ.

ವಸತಿ ಅಥವಾ ವಾಣಿಜ್ಯ ಸಂಕೀರ್ಣಗಳ ಛಾವಣಿಗಳ ಮೇಲೆ ಸೌರಫಲಕಗಳನ್ನು ಅಳವಡಿಸಿ ಉತ್ಪಾದನೆಯಾಗುವ ವಿದ್ಯುತ್‌ನ್ನು ಸ್ವಂತಕ್ಕೆ ಬಳಸಿಕೊಂಡು, ಹೆಚ್ಚುವರಿ ವಿದ್ಯುತ್‌ನ್ನು ನಿಗದಿತ ದರಗಳಲ್ಲಿ ಸರಕಾರಿ ಸ್ವಾಮ್ಯದ ವಿದ್ಯುತ್ ಪೂರೈಕೆ ಸಂಸ್ಥೆಗಳಿಗೆ ಮಾರಾಟ ಮಾಡಬಹುದಾಗಿದೆ. ಇಂತಹ ಸೌರಫಲಕಗಳ ಅಳವಡಿಕೆಗೆ ಶೇ.30ರಷ್ಟು ಸಹಾಯಧನವನ್ನೂ ಸರಕಾರಗಳು ನೀಡುತ್ತಿವೆ.

ಹಲವಾರು ರಾಜ್ಯಗಳಲಿ ಉದಾರ ನೀತಿಗಳು ಮತ್ತು ನೆಟ್ ಮೀಟರಿಂಗ್ ಮಾರ್ಗಸೂಚಿಗಳ ಹೊರತಾಗಿಯೂ ರೂಫ್‌ಟಾಪ್ ಸೋಲಾರ್ ವ್ಯವಸ್ಥೆಯ ಅಳವಡಿಕೆ ನಿರಾಶಾದಾಯಕವಾಗಿದೆ ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News