ಮನಪಾ ವ್ಯಾಪ್ತಿಯ 20 ವೃತ್ತಗಳ ನವೀಕರಣ: ಕವಿತಾ ಸನಿಲ್‌

Update: 2017-05-23 18:39 GMT

ಮಂಗಳೂರು, ಮೇ 23: ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 20 ವೃತ್ತಗಳನ್ನು ನವೀಕರಿಸಿ ಶೀಘ್ರದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಮನಪಾ ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.

ಅವರು ಇಂದು ಕದ್ರಿ ಕಂಬಳ -ಕದಿದೇವಸ್ಥಾನ ರಸ್ತೆಯ ಬಳಿಯಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ನಿರ್ಮಿಸಲಾದ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಂಗಳೂರು ಮಹಾನಗರದ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವದ ಹೆಚ್ಚಿನ ಅಗತ್ಯವಿದೆ. ಪ್ರಸಕ್ತ ಇಲ್ಲಿನ ಬಿಲ್ಡರ್‌ಗಳು ಈ ನಿಟ್ಟಿನಲ್ಲಿ ಕೈ ಜೋಡಿಸುತ್ತಿದ್ದಾರೆ. ಭಂಡಾರಿ ಬಿಲ್ಡರ್‌ನ ಪ್ರವರ್ತಕರಾದ ಲಕ್ಷ್ಮೀಶ ಭಂಡಾರಿ ಕದ್ರಿ ಕಾರಂಜಿಯನ್ನು 17ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ ಕೊಡುಗೆ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಸಮಾರಂಭದಲ್ಲಿ ಉಪ ಮೇಯರ್ ರಜನೀಶ್ , ಸ್ಥಳೀಯ ಮನಪಾ ಸದಸ್ಯರಾದ ಡಿ.ಕೆ.ಅಶೋಕ್ ಕುಮಾರ್, ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಮನಪಾ ಸದಸ್ಯರಾದ ಅಬ್ದುಲ್ ರವೂಫ್, ಸಬಿತಾ ಮಿಸ್ಕೀತ್, ಪ್ರಕಾಶ್ , ಮಾಜಿ ಮೇಯರ್ ಹರಿನಾಥ್, ನಿರ್ಮಾಣದ ಪ್ರಾಯೋಜಕತ್ವವನ್ನು ವಹಿಸಿದ ಭಂಡಾರಿ ಬಿಲ್ಡರ್ಸ್‌ನ ಪ್ರವರ್ತಕ ಲಕ್ಷ್ಮೀಶ ಭಂಡಾರಿ, ಉದ್ಯಮಿ ಎ.ಜೆ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News