ಯೆನೆಪೊಯ ಹೋಮಿಯೋಪತಿ- ಆಯುರ್ವೇದ ಕಾಲೇಜು ಆಸ್ಪತ್ರೆಗೆ ಶಿಲಾನ್ಯಾಸ

Update: 2017-05-24 07:02 GMT

ಮಂಗಳೂರು, ಮೇ 24: ಯೆನೆಪೊಯ ಹೋಮಿಯೋಪತಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಯೆನೆಪೊಯ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಶಿಲಾನ್ಯಾಸ ಕಾರ್ಯಕ್ರಮ ದೇರಳಕಟ್ಟೆ ನರಿಂಗಾನದಲ್ಲಿ ನಡೆಯಿತು.

ಸೈಯದ್ ಕುಂಞಿಕೋಯ ತಂಙಳ್ ಕುಂಬೋಳ್ ಮತ್ತು ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ ಶಿಲಾನ್ಯಾಸ ನೆರವೇರಿಸಿದರು.

ಈ ಸಂರ್ಭ ಉಪ ಕುಲಪತಿ ಡಾ. ವಿಜಯ್ ಕುಮಾರ್, ರಿಜಿಸ್ಟ್ರಾರ್ ಶ್ರೀ ಕುಮಾರ್ ಮೆನನ್, ಹಣಕಾಸು ವಿಭಾಗದ ನಿರ್ದೇಶಕ ಫರ್ಹಾದ್ ಯೆನೆಪೊಯ, ನಿರ್ದೇಶಕರಾದ ಜಾವೇದ್, ಖುರ್ಷೀದ್, ಹಣಕಾಸು ಅಧಿಕಾರಿ ಮುಹಮ್ಮದ್ ಬಾವ, ದಂತ ವಿಜ್ಞಾನ ಡೀನ್ ಡಾ. ಶ್ರೀಪತಿ ರಾವ್, ನರ್ಸಿಂಗ್ ವಿಭಾಗದ ಡೀನ್ ಆಶಾ ಪಿ. ಶೆಟ್ಟಿ, ಡಾ. ರೆಹಮಾನ್, ಹೋಮಿಯೋಪತಿ ಡೀನ್ ಡಾ. ವಿವೇಕಾನಂದ ವರ್ಣೇಕರ್ ಮತ್ತು ಆಯುರ್ವೇದ ಡೀನ್ ಡಾ. ಎಸ್.ಜಿ. ಪ್ರಸನ್ನ ಐತಾಳ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ಡಾ. ಯು.ಟಿ. ಇಫ್ತಿಕಾರ್ ಅಲಿ, ನರಿಂಗಾನ ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್, ಉಪಾಧ್ಯಕ್ಷೆ ನಳಿನಾಕ್ಷಿ, ಸದಸ್ಯರಾದ ಅಬ್ದುಲ್ ಖಾದರ್, ಮುರಳೀಧರ್ ಶೆಟ್ಟಿ, ಫಯಾಝ್, ನವಾಝ್, ಮಾಜಿ ಅಧ್ಯಕ್ಷ ಸಿದ್ದೀಕ್ ಪಾರೆ, ವಿಠಲ್ ಆಳ್ವ, ವಿವೇಕಾನಂದ ರೈ, ಕಾಸಿಂ, ಲತೀಫ್, ಮುಹಮ್ಮದ್ ದಾರಿಮಿ, ಕಟ್ಟಡದ ವಾಸ್ತುಶಿಲ್ಪಿಗಳಾದ ಇಕ್ಬಾಲ್ ಮತ್ತು ಫಾಝಿಲ್ ಹಾಗೂ ಗುತ್ತಿಗೆದಾರ ಮುಸ್ತಫಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದೇರಳಕಟ್ಟೆ ನರಿಂಗಾನ ಗ್ರಾಮದ 35 ಎಕರೆ ಪ್ರದೇಶದ ಹೊಸ ಕ್ಯಾಂಪಸ್‌ನಲ್ಲಿ ಇದೀಗ ಯೆನೆಪೊಯ ಹೋಮಿಯೋಪತಿ ಮತ್ತು ಆಯುರ್ವೇದ ಮೆಡಿಕಲ್ ಕಾಲೇಜುಗಳು ನಿರ್ಮಾಣವಾಗಲಿವೆ. 2018-19ನೆ ಸಾಲಿನಿಂದ ಉನ್ನತ ಗುಣಮಟ್ಟದ ಸುರಕ್ಷಿತ ಚಿಕಿತ್ಸೆಯೊಂದಿಗೆ ಈ ನೂತನ 25 ಹಾಸಿಗೆಗಳ ಹೋಮಿಯೋಪತಿ ಮತ್ತು 100 ಹಾಸಿಗೆಗಳ ಆಯುರ್ವೇದಿಕ್ ಆಸ್ಪತ್ರೆ ರಚನೆಯಾಗಲಿದೆ. ಕ್ಯಾಂಪಸ್‌ನಲ್ಲಿ ಆಯುರ್ವೇದಿಕ್ ಹಾಗೂ ಹೋಮಿಯೋಪತಿ ಚಿಕಿತ್ಸೆಗೆ ಅಗತ್ಯವಾದ ಔಷಧೀಯ ಗಿಡಮೂಲಿಕೆಗಳಿಂದ ಕೂಡಿದ ಉದ್ಯಾನವನವನ್ನೂ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಲ್ಲದೆ, ಸಂಶೋಧನಾ ಕೇಂದ್ರ, ರಿಕ್ರಿಯೇಶನ್ ಕೇಂದ್ರ, ಹಾಸ್ಟೆಲ್‌ಗಳು, ಸ್ಟಾಫ್ ಕ್ವಾಟರ್ಸ್‌ಗಳು ಮತ್ತು ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ಗಳನ್ನೂ ಮುಂದಿನ ದಿನಗಳಲ್ಲಿ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಯೆನೆಪೊಯ ವಿಶ್ವವಿದ್ಯಾನಿಲಯವು ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಅನುದಾನರಹಿತ ಡೀಮ್ಡ್ ವಿಶ್ವವಿದ್ಯಾನಿಲಯವಾಗಿದ್ದು, ಇದು ನ್ಯಾಕ್‌ನಿಂದ ‘ಎ’ ಗ್ರೇಡ್ ಮಾನ್ಯತೆಯನ್ನು ಪಡೆದುಕೊಂಡಿದೆ. ಪ್ರಸ್ತುತ ಐದು ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್ ಸಂಸ್ಥೆಗಳನ್ನು ಇದು ಹೊಂದಿದೆ. 2015-16ನೆ ಸಾಲಿನಲ್ಲಿ ಯೆನೆಪೊಯ ವಿಶ್ವವಿದ್ಯಾನಿಲಯವು ಹೋಮಿಯೋಪತಿ ಚಿಕಿತ್ಸಾ ಕೇಂದ್ರ ಮತ್ತು ಆಯುರ್ವೇದ ಆರೋಗ್ಯ ಕೇಂದ್ರವನ್ನು ಆಯುಷ್‌ನಡಿ ಸ್ಥಾಪಿಸಿತ್ತು. ಈ ಮೂಲಕ ಹೊರರೋಗಿ ಹಾಗೂ ಒಳರೋಗಿ ವಿಭಾಗಗಳ ಮೂಲಕ ಹೋಮಿಯೋಪತಿ ಹಾಗೂ ಆಯುರ್ವೇದಿಕ್ ಚಿಕಿತ್ಸೆಯನ್ನು ತಜ್ಞ ವೈದ್ಯರಿಂದ ಕೇಂದ್ರಗಳ ಮೂಲಕ ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News