×
Ad

ಗೂಗಲ್ ಹಾಲ್ ಆಫ್ ಫೇಮ್‌ಗೆ ಭಾರತೀಯ ವಿದ್ಯಾರ್ಥಿ

Update: 2017-05-24 13:11 IST

ನೆಡು ಕಂಡಂ,ಮೇ 24: ಗೂಗಲ್ ಹಾಲ್ ಫೇಮ್ ಪಟ್ಟಿಗೆ ಇಡುಕ್ಕಿಯ ಫ್ಲಸ್‌ವನ್(ಪ್ರಥಮ ಪಿಯುಸಿ) ವಿದ್ಯಾರ್ಥಿ ಇಡುಕ್ಕಿಯ ಜುಬಿಟ್ ಜಾನ್ ಸೇರ್ಪಡೆಗೊಂಡಿದ್ದಾನೆ. ಯಾರದೆ ಜಿಮೇಲ್ ಎಕೌಂಟನ್ನು ಹ್ಯಾಕ್ ಮಾಡಬಹುದು ಎಂದು ಪತ್ತೆಹಚಿದ್ದಕ್ಕಾಗಿ ಹದಿನಾರು ವರ್ಷದ ವಿದ್ಯಾರ್ಥಿ ಜಾನ್‌ನನ್ನು ಗೂಗಲ್ ಈ ಗೌರವದಿಂದ ಪುರಸ್ಕರಿಸಿದೆ.

ಜಾನ್, ಗೂಗಲ್ ಪ್ರತಿಪಾದಿಸುವ ಖಾಸಗಿತ್ವವನ್ನು ಇಲ್ಲವಾಗಿಸಲು ಸಾಧ್ಯ ಎಂದು ಕಂಡುಹಿಡಿದಿದ್ದ. ಫೇಸ್‌ಬುಕ್ ಸಹಿತ ಒಬ್ಬವ್ಯಕ್ತಿಯ ಎಲ್ಲ ಖಾತೆಗಳಿಗೆ ನುಸುಳಬಹುದು. ಅಲ್ಲಿಂದ ಅವರ ಖಾಸಗಿ ದಾಖಲೆಗಳನ್ನು ಸೋರಿಕೆ ಮಾಡಬಹುದು ಎನ್ನುವುದನ್ನು ಜುಬಿಟ್‌ಜಾನ್‌ ಸಂಶೋಧಿಸಿದ್ದಾನೆ. . ಅವನ ಸಂಶೋಧನೆಯನ್ನು ಗೂಗಲ್ ಪುರಸ್ಕರಿಸಿ, ಲೋಪಗಳನ್ನು ತಿದ್ದಿಕೊಳ್ಳುವ ಕ್ರಮವನ್ನು ಆರಂಭಿಸಿದೆ.

ಗೂಗಲ್ ಹಾಲ್ ಆಫ್ ಪೇಮ್‌ನಲ್ಲಿ ಕೆಲವು ಕೇರಳಿಯರಿಗಷ್ಟೇ ಸ್ಥಾನ ದೊರಕಿದೆ. ಆದರೆ ಜುಬಿಟ್ ಹಾಲ್‌ಆಫ್ ಫೇಮ್‌ನಲ್ಲಿ ಸ್ಥಾನಗಳಿಸಿದ ಭಾರತದ ಅತಿಕಿರಿಯ ವ್ಯಕ್ತಿ ಜುಬಿಟ್ ಆಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News